ನವದೆಹಲಿ, ಅ. 14 (DaijiworldNews/MB) : ವಿಶೇಷ ವಿವಾಹ ಕಾಯ್ದೆಯಡಿ ಸಲಿಂಗಿಗಳ ವಿವಾಹ ಮತ್ತು ವಿದೇಶ ವಿವಾಹ ಕಾಯ್ದೆಯಡಿ ಸಲಿಂಗಿಗಳ ವಿವಾಹದ ನೋಂದಣಿ ಪ್ರಕರಣಗಳ ಬಗ್ಗೆ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಕ್ಕೆ ಅಭಿಪ್ರಾಯ ತಿಳಿಸುವಂತೆ ದೆಹಲಿ ಹೈಕೋರ್ಟ್ ತಿಳಿಸಿದೆ.
ಇಬ್ಬರು ಮಹಿಳೆಯರು ತಾವು ವಿಶೇಷ ವಿವಾಹ ಕಾಯ್ದೆಯಡಿ ವಿವಾಹವಾಗಬೇಕೆಂದು ಕೋರಿ ದೆಹಲಿ ಹೈಕೋರ್ಟ್ಗೆ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ದೆಹಲಿ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಸಲಿಂಗ ವಿವಾಹ ಮತ್ತು ನೋಂದಣಿ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಮೂರ್ತಿ ಆರ್.ಎಸ್.ಎಂಡ್ಲವ್ ಮತ್ತು ಆಶಾ ಮೆನನ್ ಅವರನ್ನೊಳಗೊಂಡ ಪೀಠವು ಸೂಚಿಸಿದೆ.
ಮತ್ತೊಂದು ಪ್ರಕರಣದಲ್ಲಿ ಅಮೇರಿಕಾದಲ್ಲಿ ವಿವಾಹವಾಗಿರುವ ಇಬ್ಬರು ಪುರುಷರು ವಿದೇಶಿ ವಿವಾಹ ಕಾಯ್ದೆಯಡಿ ಅವರ ವಿವಾಹ ನೋಂದಾವಣೆಗೆ ನಿರಾಕರಿಸಲಾಗಿದೆ. ತಮ್ಮ ವಿವಾಹವನ್ನು ವಿದೇಶಿ ವಿವಾಹ ಕಾಯ್ದೆಯಡಿ ನೋಂದಾವಣೆ ಮಾಡಬೇಕೆಂದು ಇಬ್ಬರು ಪುರುಷರು ಸಲ್ಲಿಸಿದ್ದಾರೆ.
ಈ ಹಿನ್ನೆಲೆ ನ್ಯಾಯಾಲಯವು ಕೇಂದ್ರ ಸರ್ಕಾರ ಹಾಗೂ ನ್ಯೂಯಾರ್ಕ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ನೋಟಿಸ್ ನೀಡಿದ್ದು ಈ ಪ್ರಕರಣದ ವಿಚಾರಣೆಯನ್ನು 2021ರ ಜನವರಿ 8ಕ್ಕೆ ಮುಂದೂಡಿದೆ.