ನವದೆಹಲಿ, ಅ. 14 (DaijiworldNews/MB) : ಕೃಷಿ ಮಸೂದೆಗಳ ವಿರುದ್ದ ಪ್ರತಿಭಟನಾ ನಿರತ 30 ರೈತ ಸಂಘಟನೆಗಳೊಂದಿಗೆ ದೆಹಲಿಯಲ್ಲಿ ಕೇಂದ್ರ ಸರ್ಕಾರದೊಂದಿಗೆ ನಿಗದಿಯಾಗಿದ್ದ ಸಭೆಯು ದಿಢೀರನ್ನೇ ರದ್ದಾಗಿದೆ. ಇದರಿಂದಾಗಿ ತೀವ್ರ ಆಕ್ರೋಶಗೊಂಡ ರೈತರು ಕೃಷಿ ಕಾನೂನುಗಳ ಪ್ರತಿಗಳನ್ನು ಹರಿದು ಸಭೆಯಿಂದ ಹೊರ ನಡೆದಿದ್ದಾರೆ.
ಕೃಷಿ ಕಾರ್ಯದರ್ಶಿಯೊಂದಿಗೆ ಸಭೆ ನಡೆಸಲಾಗಿದ್ದು ಕೇಂದ್ರ ಸಚಿವ ನರೇಂದ್ರ ಸಿಂಗ್ ಥೋಮರ್ ಅವರ ಉಪಸ್ಥಿತಿಯಲ್ಲಿ ಸಭೆ ನಡೆಯಬೇಕು ಎಂದು ರೈತರ ಆಗ್ರಹವಾಗಿತ್ತು. ಕೇಂದ್ರ ಸಚಿವರು ಸಭೆಗೆ ಗೈರು ಹಾಜರಾದ ಕಾರಣ ತೀವ್ರ ಆಕ್ರೋಶಗೊಂಡ ರೈತರು ಸಚಿವಾಲಯಗೊಳಗೆ ಘೋಷಣೆಗಳನ್ನು ಕೂಗಿ, ವಿವಾದಾತ್ಮಕ ಕೃಷಿ ಮಸೂದೆಗಳ ಪ್ರತಿಯನ್ನು ಹರಿದು ಹಾಕಿದರು.
ವಿವಾದಾತ್ಮಕ ಮಸೂದೆಗಳ ವಿರುದ್ದ ದೇಶದಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಲ್ಲಿದ್ದು ಮಂಗಳವಾರ ಕೇಂದ್ರದೊಂದಿಗೆ ಮಾತುಕತೆ ನಡೆಸಲು ತೀರ್ಮಾನಿಸಲಾಗಿತ್ತು.