ನವದೆಹಲಿ, ಅ. 14 (DaijiworldNews/PY): ಜಾರ್ಖಂಡ್ ಕಲ್ಲಿದ್ದಲು ಹಂಚಿಕೆಗೆ ಸಂಬಂಧಪಟ್ಟ ಅಕ್ರಮ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ಮಾಜಿ ಕೇಂದ್ರದ ಮಾಜಿ ಸಚಿವ ದಿಲೀಪ್ ರೇ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಸಿಬಿಐ ಬುಧವಾರ ದೆಹಲಿ ನ್ಯಾಯಾಲಯಕ್ಕೆ ಒತ್ತಾಯಿಸಿದೆ.
ವಿಶೇಷ ನ್ಯಾಯಮೂರ್ತಿ ಭಾರತ್ ಪರಾಶರ್ ಅವರು ಪ್ರಕರಣದ ವಿಚಾರಣೆ ನಡೆಸಿದ್ದು, ಅಕ್ಟೋಬರ್ 26ಕ್ಕೆ ಆದೇಶವನ್ನು ಕಾಯ್ದಿರಿಸಿದೆ.
ದಿಲೀಪ್ ರೇ ಅವರೊಂದಿಗೆ ಪ್ರಕರಣದ ಇತರ ಅಪರಾಧಿಗಳಾದ ಆ ಸಮಯದಲ್ಲಿ ಕಲ್ಲಿದ್ದಲು ಸಚಿವಾಲಯದ ಹಿರಿಯ ಅಧಿಕಾರಿಗಳಾಗಿದ್ದ ಪ್ರದೀಪ್ ಕುಮಾರ್ ಬ್ಯಾನರ್ಜಿ, ನಿತ್ಯಾನಂದ ಗೌತಮ್ ಹಾಗೂ ಕ್ಯಾಸ್ಟ್ರೋಲ್ ಟೆಕ್ನಾಲಜಿ ಲಿಮಿಟೆಡ್ನ ನಿರ್ದೇಶಕ ಮಹೇಂದ್ರಕುಮಾರ್ ಅಗರ್ವಾಲ್ ಅವರಿಗೆ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಸಿಬಿಐ ಒತ್ತಾಯಿಸಿದೆ.
ಅಲ್ಲದೇ, ಪ್ರಕರಣದ ತಪ್ಪಿತಸ್ಥರಾದ ಸಿಟಿಎಲ್ ಮತ್ತು ಕ್ಯಾಸ್ಟ್ರೊನ್ ಮೈನಿಂಗ್ ಲಿ.(ಸಿಎಂಎಲ್) ಸಂಸ್ಥೆಗೆ ಗರಿಷ್ಠ ದಂಡ ವಿಧಿಸಲು ಸರ್ಕಾರದ ಪರ ವಕೀಲರು ವಾದಿಸಿದರು.