ನವದೆಹಲಿ ಅ.15 (DaijiworldNews/HR): ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ಕುರಿತು ಚರ್ಚೆಗಳು ನಡೆಯುತ್ತಿದ್ದು, ಇದೀಗ ''ಬೆಂಗಳೂರು ನಗರದ ನಾಗರಿಕರಿಗೆ ಕಾಂಗ್ರೆಸ್ ಪಕ್ಷ ಸುರಕ್ಷಿತವಲ್ಲ'' ಎಂಬುದಾಗಿ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ''ಬೆಂಗಳೂರು ನಗರದ ನಾಗರಿಕರಿಗೆ ಕಾಂಗ್ರೆಸ್ ಸುರಕ್ಷಿತವಲ್ಲ, ಹಾಗಾಗಿ ಈ ಬಾರಿಯ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ'' ಎಂದು ಹೇಳಿದರು.
ಇನ್ನು ಇತ್ತೀಚೆಗೆ ನಡೆದ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಘಟನೆ ಕುರಿತು ಮಾತನಾಡಿದ ಕುಮಾರಸ್ವಾಮಿ, ''ಈ ಘಟನೆಯ ನಿಜವಾದ ಚಿತ್ರಣ ಇದೀಗ ಬಯಲಾಗಿದ್ದು, ಕಾಂಗ್ರೆಸ್ನ ನಾಯಕರು ದಾಳಿಯಲ್ಲಿ ಮುಖ್ಯ ಅಪರಾಧಿಗಳು. ಅವರು ನಾಗರಿಕರ ರಕ್ಷಣೆ ಮಾಡಲ್ಲ. ಹಾಗಾಗಿ ಈಗ ಜನರೇ ಯೋಚನೆ ಮಾಡಲಿ'' ಎಂದು ಹೇಳಿದ್ದಾರೆ.