ಹೊಸದಿಲ್ಲಿ, ಅ.15 (DaijiworldNews/HR): ಆರ್ಜೆಡಿ ಪಕ್ಷವು ವಿಧಾನಸಭೆ ಚುನಾವಣೆಯಲ್ಲಿ ಗೆದ್ದರೆ ಬಿಹಾರ ಉಗ್ರರಿಗೆ ಸ್ವರ್ಗವಾಗಲಿದೆ ಎಂದು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು ಕಾಶ್ಮೀರದಲ್ಲಿ ಉಗ್ರರನ್ನು ಮಟ್ಟ ಹಾಕಲಾಗುತ್ತಿದೆ. ಚುನಾವಣೆಯಲ್ಲಿ ಆರ್ ಜೆಡಿ ಜಯ ಗಳಿಸಿದರೆ ಕಾಶ್ಮೀರದಲ್ಲಿರುವ ಉಗ್ರರಿಗೆ ಬಿಹಾರ ಉತ್ತಮ ತಾಣವಾದೀತು ಎಂದು ಹೇಳಿದ್ದಾರೆ.
ಇನ್ನು ಯಾವುದೇ ಒಂದು ವಿಚಾರಕ್ಕೂ ಬಿಜೆಪಿಗೆ ಪಾಕಿಸ್ಥಾನ ಅಥವಾ ಕಾಶ್ಮೀರ ಲಿಂಕ್ ಮಾಡುವುದು ಅಭ್ಯಾಸವಾಗಿಬಿಟ್ಟಿದೆ ಎಂದು ಕಾಂಗ್ರೆಸ್ ಟೀಕಿಸಿದೆ.