ಮುಂಬೈ, ಅ. 15 (DaijiworldNews/MB) : ಸ್ಪೀಕರ್ ಅನುಮತಿ ಪಡೆಯದೆ ವಿಧಾನಸಭಾ ಪ್ರಕ್ರಿಯೆಗಳ ಪ್ರತಿಯನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದಕ್ಕಾಗಿ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ಹಕ್ಕು ಚ್ಯುತಿ ಉಲ್ಲಂಘನೆ ನೋಟಿಸನ್ನು ಮಹಾರಾಷ್ಟ್ರ ವಿಧಾನಸಭೆ ಕಾರ್ಯದರ್ಶಿ ನೀಡಿದ್ದಾರೆ.
ಸ್ಪೀಕರ್ ಅನುಮತಿ ಪಡೆಯದೆ ವಿಧಾನಸಭಾ ಪ್ರಕ್ರಿಯೆಗಳ ಪ್ರತಿಯನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದಕ್ಕಾಗಿ ಈ ಹಿಂದೆ ಸೆಪ್ಚೆಂಬರ್ 16ರಂದು ವಿಧಾನಸಭೆ ಕಾರ್ಯದರ್ಶಿ ಅವರು ಅರ್ನಬ್ ಗೋಸ್ವಾಮಿ ಅವರಲ್ಲಿ ಸ್ಪಷ್ಟನೆ ಕೇಳಿದ್ದರು. ಈಗ ಅಕ್ಟೋಬರ್ 13 ರಂದು ನೋಟಿಸ್ ನೀಡಲಾಗಿದೆ.
ಸೆಪ್ಚೆಂಬರ್ 16ರಂದು ವಿಧಾನಸಭೆ ಕಾರ್ಯದರ್ಶಿ ಅವರು ಅರ್ನಬ್ ಗೋಸ್ವಾಮಿ ಅವರಲ್ಲಿ ಸ್ಪಷ್ಟನೆ ಕೇಳಿದ್ದು ಇದಕ್ಕೆ ಅಕ್ಟೋಬರ್ 5 ರೊಳಗೆ ಪ್ರತಿಕ್ರಿಯಿಸಲು ತಿಳಿಸಿದ್ದರು, ಆದರೆ ಯಾವುದೇ ಪ್ರತಿಕ್ರಿಯೆ ಬಾರದ ಕಾರಣದಿಂದಾಗಿ ಅಕ್ಟೋಬರ್ 20ರೊಳಗೆ ಪ್ರತಿಕ್ರಿಯೆ ನೀಡಲು ಹೇಳಿದ್ದಾರೆ.