ತ್ರಿಶೂರ್ , ಅ.15 (DaijiworldNews/HR): ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಮಲೆಯಾಳಂನ ಖ್ಯಾತ ಕವಿ ಅಕ್ಕಿತಂ ಅಚ್ಯುತನ್ ನಂಬೂದಿರಿ (94) ಚಿಕಿತ್ಸೆ ಫಲಕಾರಿಯಾಗದೇ ಇಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕವಿ ಅಕ್ಕಿತಂ ಅಚ್ಯುತನ್ ನಂಬೂದಿರಿ ಅವರು ಜ್ಞಾನಪೀಠ ಪ್ರಶಸ್ತಿ ಪಡೆದ ಆರನೇ ಕೇರಳಿಗರಾಗಿದ್ದಾರೆ. ಅವರು ಎಜುತಾಚನ್ ಪುರಸ್ಕಾರ, ವಯಲಾರ್ ಪ್ರಶಸ್ತಿ ಇತ್ಯಾದಿಗಳನ್ನು ಪಡೆದಿದ್ದು, ದೇಶವು ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ಅಕ್ಕಿತಂ ಅವರು ಪಾಲಕ್ಕಾಡ್ ನ ಕುಮಾರನಲ್ಲೂರು ಸಮೀಪದ ಅಮೇಟಿಕ್ಕರದಲ್ಲಿ 1926ರ ಮಾರ್ಚ್ 18ರಂದು ಅಮೆಟು ಅಕ್ಕಿತಾತು ಮನಯಿಲ್ ವಾಸುದೇವನ್ ನಂಬೂದಿರಿ ಮತ್ತು ಚೆಗೂರು ಮಣೈಕ್ಕಲ್ ಪಾರ್ವತಿ ಅಂತರ್ಜನಂ ಎಂಬವರಿಗೆ ಜನಿಸಿದರು. ಸಂಸ್ಕೃತ, ಜ್ಯೋತಿಷ್ಯ, ಸಂಗೀತ ದಲ್ಲಿ ಶಿಕ್ಷಣ ಪಡೆದ ನಂತರ ಕಾಲೇಜು ಶಿಕ್ಷಣ ವನ್ನು ಪಡೆದರೂ ಪದವಿ ಯನ್ನು ಪೂರ್ಣಗೊಳಿಸಲಿಲ್ಲ.
ಅಕ್ಕಿಧಾಮ್ ಶ್ರೀದೇವಿ ಅಂತರ್ಜನಂ ಅವರನ್ನು ವಿವಾಹವಾಗಿದ್ದು, ದಂಪತಿಗೆ ಪುತ್ರ ನಾರಾಯಣನ್ ಮತ್ತು ಪುತ್ರಿ ಶ್ರೀಜಾ ಇದ್ದಾರೆ.