ಬೆಂಗಳೂರು,ಅ.15 (DaijiworldNews/HR): ಉಪ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಎರಡು ದಿನಕ್ಕೊಮ್ಮೆ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಈ ಕುರಿತು ಮಾತನಾಡಿದ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಾಬು , ನಾವು ಮತ ಕೇಳಲು ಹಲವು ಜನರ ಜೊತೆ ಮಾತನಾಡಬೇಕಾಗುತ್ತದೆ, ಇನ್ನೂ ವರ್ಚ್ಯೂಯಲ್ ವೇದಿಕೆ ತಲುಪಲು ಸಾಧ್ಯವಾಗಿಲ್ಲ, ಹೀಗಾಗಿ ಅವರನ್ನೇ ಭೇಟಿಯಾಗಿ ಮತಯಾಚಿಸುವುದೊಂದೇ ನಮಗಿರುವ ಆಯ್ಕೆ, ಜೊತೆಗೆ ವಿಧಾನಸಭೆಗಿಂತ ಪರಿಷತ್ ಚುನಾವಣಾ ಕ್ಷೇತ್ರದ ದೊಡ್ಡದಾಗಿರುತ್ತದೆ, ಹಾಗಾಗಿ ಹೆಚ್ಚಿನ ಕ್ಷೇತ್ರಗಳಿಗೆ ಸಂಚರಿಸಬೇಕು ಎಂದಿದ್ದಾರೆ.
ಇನ್ನು ಎರಡು ದಿನಕ್ಕೊಮ್ಮೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸುವುದು ಆದೇಶವಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥ ಸಂಜೀವ್ ಕುಮಾರ್ ಹೇಳಿದ್ದಾರೆ.
ಕೊರೊನಾ ಕಾರಣದಿಂದ ಉಪ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಯಾವಾಗಲೂ ಮಾಸ್ಕ್, ಗ್ಲೌಸ್ ಧರಿಸುವುದು, ಮತ್ತು ಬಿಸಿನೀರು ಕುಡಿಯುವುದು ಸೇರಿದಂತೆ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವು ಕಡ್ಡಾಯವಾಗಿದೆ.