ಉತ್ತರ ಪ್ರದೇಶ,ಅ.15 (DaijiworldNews/HR): 13 ವರ್ಷದ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ಪಾಪಿ ತಂದೆ ಹಾಗೂ ಆತನ ಸಹೋದರನಿಗೆ ಉತ್ತರ ಪ್ರದೇಶ ಕೋರ್ಟ್ 15 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಬಾಲಕಿ ಮೇಲೆ ಅತ್ಯಾಚಾರ ಎಸಗಿದ ತಂದೆ ಮತ್ತು ಆತನ ಸಹೋದರ ಸೇರಿ ಇಬ್ಬರು ಪಾಪಿಗಳಿಗೆ ಪೊಕ್ಸೊ ಕಾಯ್ದೆ ಅಡಿ 15 ವರ್ಷ ಜೈಲು ಶಿಕ್ಷೆ ಹಾಗೂ ತಲಾ 10,000 ರೂ. ದಂಡ ವಿಧಿಸಿದೆ ಎಂದು ಸರ್ಕಾರಿ ಅಭಿಯೋಜಕ ರಾಮ್ ಸುಫರ್ ಸಿಂಗ್ ತಿಳಿಸಿದ್ದಾರೆ.
ಮಾರ್ಚ್ 14, 2016ರಲ್ಲಿ ಚೈಲ್ಡ್ ಲೈನ್ ಸಂಯೋಜಕರು ಪೈಲಾನಿ ಪೊಲೀಸ್ ಠಾಣೆಯಲ್ಲಿ ಬಾಲಕಿ ತಂದೆ ಹಾಗೂ ಆತನ ಸಹೋದರನ ವಿರುದ್ಧ ಕೇಸ್ ದಾಖಲಿಸಿದ್ದರು.