ನವದೆಹಲಿ, ಅ. 15 (DaijiworldNews/MB) : ಟಿಆರ್ಪಿ ಹಗರಣದ ಬಗ್ಗೆ ಮುಂಬೈ ಪೊಲೀಸ್ ತನಿಖೆಯನ್ನು ಪ್ರಶ್ನಿಸಿ ರಿಪಬ್ಲಿಕ್ ಟಿವಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು ಬಾಂಬೆ ಹೈಕೋರ್ಟ್ ಬಳಿಯೇ ನಿಮ್ಮ ಕಚೇರಿಯಿದೆ. ಸುಪ್ರೀಂ ಮೆಟ್ಟಿಲೇರುವ ಮೊದಲು ಬಾಂಬೆ ಹೈಕೋರ್ಟ್ ಅನ್ನು ಸಂಪರ್ಕಿಸಬೇಕು ಎಂದು ಸೂಚಿಸಿದೆ.
ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ನೇತೃತ್ವದ ಮೂವರು ನ್ಯಾಯಾಧೀಶರನ್ನು ಒಳಗೊಂಡ ಪೀಠವು, ನಿಮ್ಮ ಕಚೇರಿ ಮುಂಬೈ ವರ್ಲಿಯಲ್ಲಿದೆ. ವರ್ಲಿಯಿಂದ ಫ್ಲೋರಾ ಫೌಂಟೇನ್ (ಬಾಂಬೆ ಹೈಕೋರ್ಟ್ ಇರುವ ಸ್ಥಳ) ಸಮೀಪದಲ್ಲಿದೆ. ಹಾಗಿರುವಾಗ ನಿಮಗೆ ಮೊದಲು ಹೈಕೋರ್ಟ್ ಮೇಲೆ ನಂಬಿಕೆ ಇರಬೇಕು ಎಂದು ಹೇಳಿದೆ.
ಇನ್ನು ನ್ಯಾಯಾಧೀಶರು, ಪೊಲೀಸ್ ಅಧಿಕಾರಿಗಳು ಪತ್ರಿಕೆಗಳಿಗೆ ಹೇಳಿಕೆ ನೀಡುವುದನ್ನು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಅವರು ಖಂಡಿಸಿದ್ದು "ಈ ದಿನಗಳಲ್ಲಿ ಪೊಲೀಸ್ ಆಯುಕ್ತರು ಪತ್ರಿಕಾಗೋಷ್ಠಿಯಲ್ಲಿ ನಡೆಸುವ ಬಗ್ಗೆ ನಾವು ಗಮನಿಸಬೇಕು" ಎಂದಿದ್ದಾರೆ.
ರಿಪಬ್ಲಿಕ್ ಟಿವಿಯ ವಿರುದ್ದ ಟಿಆರ್ಪಿ ತಿರುಚುವಿಕೆಯ ಆರೋಪವಿದ್ದು ಈ ಬಗ್ಗೆ ಮುಂಬೈ ಪೊಲೀಸರಿಗೆ ನೀಡಲಾಗಿರುವ ದೂರಿನಂತೆ ತನಿಖೆ ನಡೆಸಲಾಗುತ್ತಿದೆ.