ಚೆನ್ನೈ, ಅ. 15 (DaijiworldNews/PY): ನಟ ರಜನಿಕಾಂತ್ ಅವರು ತಮ್ಮ ಮಾಲೀಕತ್ವದ ಮದುವೆ ಹಾಲ್ಗೆ ಸಂಬಂಧಿಸಿದ ಆಸ್ತಿ ತೆರಿಗೆಯನ್ನು ಪಾವತಿ ಮಾಡಿದ್ದೇನೆ ಎಂದು ಗುರುವಾರ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಮದುವೆ ಹಾಲ್ಗೆ ಸಂಬಂಧಿಸಿದಂತೆ ಆಸ್ತಿ ತೆರಿಗೆ ಬಗ್ಗೆ ಇತ್ಯರ್ಥ ಮಾಡಲು ಮದ್ರಾಸ್ ಹೈಕೋರ್ಟ್ ಅನ್ನು ಸಂಪರ್ಕ ಮಾಡಿದ್ದು ತಪ್ಪು. ಇದು ನನಗೆ ಪಾಠ ಕಲಿಸಿದೆ. ಸಂಪೂರ್ಣ ಆಸ್ತಿ ತೆರಿಗೆಯನ್ನು ನಾನು ಪಾವತಿ ಮಾಡಿದ್ದೇನೆ ಎಂದಿದ್ದಾರೆ.
ರಜನಿಕಾಂತ್ ಅವರ ಮಾಲೀಕತ್ವದ ಮದುವೆ ಹಾಲ್ಗೆ ಅಧಿಕಾರಿಗಳು ಸುಮಾರು 6.5ಲಕ್ಷ ರೂ. ಆಸ್ತಿ ತೆರಿಗೆಗೆ ದಂಡ ವಿಧಿಸುವುದನ್ನು ತಡೆಯುವುದಕ್ಕೆ ಮದ್ರಾಸ್ ಹೈಕೋರ್ಟ್ಗೆ ಸಲ್ಲಿಸಿರುವ ತನ್ನ ಅರ್ಜಿಯನ್ನು ವಾಪಾಸ್ಸು ಪಡೆದುಕೊಂಡಿದ್ದು, ಇದರ ಮಾರನೇ ದಿನ ಅವರು ಈ ಹೇಳಿಕೆ ನೀಡಿದ್ದಾರೆ.
ಈ ವಿಚಾರವಾಗಿ ನೀವು ಹೈಕೋರ್ಟ್ ಅನ್ನು ಸಂಪರ್ಕ ಮಾಡುವ ಮುನ್ನ ಮಹಾನಗರ ಪಾಲಿಕೆಗೆ ಜ್ಞಾಪನಾ ಪತ್ರ ಸಲ್ಲಿಸಬೇಕಿತ್ತು ಎಂದು ಹೈಕೋರ್ಟ್ ತಿಳಿಸಿತ್ತು.