ಬೆಂಗಳೂರು, ಅ. 16 (DaijiworldNews/PY): ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಏಳು ತಿಂಗಳ ಬಳಿಕ ತವರೂರು ಶಿಕಾರಿಪುರಕ್ಕೆ ಪ್ರಯಾಣಿಸಲಿದ್ದಾರೆ.
ಸಿಎಂ ಬಿಎಸ್ವೈ ಅವರು ಫೆಬ್ರವರಿಯಲ್ಲಿ ತಮ್ಮ ಹುಟ್ಟುಹಬ್ಬದ ಸಂದರ್ಭ ಶಿಕಾರಿಪುರಕ್ಕೆ ಹೊಗಿದ್ದರು. ನಂತರ ಕೊರೊನಾ ಲಾಕ್ಡೌನ್ ಹಿನ್ನೆಲೆ ತಮ್ಮ ಊರಿಗೆ ಭೇಟಿ ನೀಡಿರಲಿಲ್ಲ. ಇದೀಗ ಸತತ ಏಳು ತಿಂಗಳ ಬಳಿಕ ಸಿಎಂ ತಮ್ಮ ತವರೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ಇನ್ನು ಶಿಕಾರಿಪುರಕ್ಕೆ ಪ್ರಯಾಣ ಮಾಡಲಿರವ ಸಿಎಂ ಅವರು ದಸರಾ ಆರಂಭವಾಗುತ್ತಿದ್ದಂತೆ ಅಲ್ಲೇ ಉಳಿದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಲ್ಲದೇ, ಈ ನಡುವೆ ಸಿಎಂ ಅವರ ಆಪ್ತರು ಸೇರಿದಂತೆ ಕುಟುಂಬಸ್ಥರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಸಿಎಂ ಅವರು ಅ.18ರಂದು ಬೆಂಗಳೂರಿನಿಂದ ಹೊರಡಲಿದ್ದು, ಸಂಜೆ 4 ಗಂಟೆಯ ಸುಮಾರಿಗೆ ಶಿಕಾರಿಪುರ ಹೆಲಿಪ್ಯಾಡ್ಗೆ ತಲುಪಲಿದ್ದು, 19ರಂದು ಕಲ್ಲುವಡ್ಡು ಏತನೀರಾವರಿ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
20ರಂದು ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿತರಿಸಲಿದ್ದು, ಬಳಿಕ ಹೆಲಿಕಾಫ್ಟರ್ ಮುಖೇನೆ ಬೆಂಗಳೂರಿಗೆ ವಾಪಾಸ್ಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.