ಶ್ರೀನಗರ, ಅ. 16 (DaijiworldNews/PY): ಹಾನಿಗೊಳಗಾಗಿದ್ದ ಪಾಕಿಸ್ತಾನದ ಅಧಿಕಾರಿಯೊಬ್ಬರ ಸಮಾಧಿಯನ್ನು ಪುನಃಸ್ಥಾಪಿಸಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಈ ಮೂಲಕ ಭಾರತೀಯ ಸೇನೆ ಗೌರವ ಸಲ್ಲಿಸಿದೆ.
ಈ ಬಗ್ಗೆ ಚಿನಾರ್ ಕಾರ್ಪ್ಸ್ ಟ್ವೀಟ್ ಮಾಡಿದ್ದು, ಪಾಕಿಸ್ತಾನ ಸೇನೆಯ ಸಿತಾರಾ ಇ ಜುರಾತ್ ಮೊಹಮ್ಮದ್ ಶಬೀರ್ ಖಾನ್ ಅವರು ನೌಗಂನ ಗಡಿ ನಿಯಂತ್ರಣ ರೇಖೆಯಲ್ಲಿ 1972 ಮೇ 5ರಂದು ಮೃತಪಟ್ಟಿದ್ದು, ಇದೀಗ ಅವರ ಸಮಾಧಿಯನ್ನು ದುರಸ್ತಿ ಮಾಡಲಾಗಿದೆ. ಇದು ಭಾರತದ ಸೇನೆ ಮತ್ತು ಚಿನಾರ್ ಕಾರ್ಪ್ಸ್ ಸಂಪ್ರದಾಯದಂತೆ ನಡೆದಿದೆ ಎಂದು ತಿಳಿಸಿದೆ.
ಮೇಜರ್ ಮೊಹಮ್ಮದ್ ಶಬೀರ್ ಖಾನ್ ಅವರ ನೆನಪಿಗಾಗಿ, ಸಿತಾರ್-ಎ-ಜುರತ್ ಶಾಹಿದ್ 05 ಮೇ 1972, 1630 ಹೆಚ್, 9 ಸಿಖ್ನ ಪ್ರತಿದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಉಲ್ಲೇಖಿಸಿದೆ.
ಭಾರತೀಯ ಸೇನೆಯ ನಂಬಿಕೆಯಂತೆ ಮೃತಪಟ್ಟ ಸೈನಿಕ ಯಾವುದೇ ದೇಶದವನಾದರೂ ಕೂಡಾ ಆತ ಗೌರವಕ್ಕೆ ಅರ್ಹ. ಜಗತ್ತಿನಲ್ಲಿ ಭಾರತೀಯ ಸೇನೆಯ ರೀತಿ ಇದಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
1972ರಲ್ಲಿ ಶಬ್ಬಿರ್ ಖಾನ್ ಅವರು ಗಡಿ ನಿಯಂತ್ರಣ ರೇಖೆಯ ಸಮೀಪ ಭಾರತೀಯರ ಯೋಧರ ದಾಳಿಗೆ ತುತ್ತಾಗಿ, ಮೃತಪಟ್ಟಿದ್ದರು. ಇವರು ಸೀತಾರಾ-ಎ-ಜುರಾತ್ ಪ್ರಶಸ್ತಿಗೆ ಪಡೆದುಕೊಂಡಿದ್ದಾರೆ.