ಕಲಬುರ್ಗಿ, ಅ. 16 (DaijiworldNews/HR): ಪ್ರವಾಹದಿಂದ ಉತ್ತರ ಕರ್ನಾಟಕ ಅನೇಕ ಭಾಗಗಳಲ್ಲಿ ಜನರು ತತ್ತರಿಸಿ ಹೋಗಿದ್ದು, ಅಂತಹ ಜನರಿಗೆ ನೆರವಾಗಬೇಕಾಗಿರುವುದು ಅಧಿಕಾರಿಗಳ ಕರ್ತವ್ಯವಾಗಿದ್ದು, ಒಂದು ವೇಳೆ ಯಾವುದೇ ಅಧಿಕಾರಿಗಳು ನಿರ್ಲಕ್ಷ್ಯ ತೋರಿದಲ್ಲಿ ಯಾವುದೇ ಮುಲಾಜಿಲ್ಲದೇ ಅವರನ್ನು ಅಮಾನತ್ತುಗೊಳಿಸಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಆರ್ ಅಶೋಕ್ ಅವರು ಕಲಬುರ್ಗಿಯ ಸಾರಡಗಿ ಸೇತುವೆಗೆ ಭೇಟಿ ನೀಡಿ, ಉಕ್ಕಿ ಹರಿಯುತ್ತಿರುವ ಭೀಮ ನದಿಯನ್ನು ವೀಕ್ಷಿಸಿ ಬಳಿಕ, ಸಂತ್ರಸ್ತರನ್ನು ಭೇಟಿ ಮಾಡಿದ ವೇಳೆ, ಮನೆ, ಜಮೀನಿನಲ್ಲಿದ್ದ ಬೆಳೆ ನೀರುಪಾಲಾಗಿದೆ. ನಮ್ಮ ನೆರವಿಗೆ ಯಾವ ಅಧಿಕಾರಿಗಳು ಬಂದಿಲ್ಲ ಎಂಬುದಾಗಿ ಜನರು ಅಳಲು ತೋಡಿಕೊಂಡಿದ್ದು, ಅಧಿಕಾರಿಗಳು ನಿರ್ಲಕ್ಷ್ಯ ತೋರಿದಲ್ಲಿ ಯಾವುದೇ ಮುಲಾಜಿಲ್ಲದೇ ಅವರನ್ನು ಅಮಾನತ್ತುಗೊಳಿಸಲಾಗುವುದು ಎಂದರು.
ಇನ್ನು ಸಂತ್ರಸ್ತರನ್ನು ಸಂತೈಸಿದ ಕಂದಾಯ ಅಶೋಕ್, ಈ ಸಂದರ್ಭದಲ್ಲಿ ನೆರೆ, ಪ್ರವಾಹ ಸಂತ್ರಸ್ತರಿಗೆ ಸರಿಯಾಗಿ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿ, ನಿರ್ಲಕ್ಷ್ಯ ತೋರುವ ಅಧಿಕಾರಿಗಳನ್ನು ಮುಲಾಜಿಲ್ಲದೇ ಅಮಾನತ್ತುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.