ಹೈದರಾಬಾದ್,ಅ. 17 (DaijiworldNews/HR): ಬರ್ತ್ ಡೇ ಪಾರ್ಟಿಗೆ ಬಂದಿದ್ದ ಪದವಿ ವಿದ್ಯಾರ್ಥಿನಿ ಮೇಲೆ ತನ್ನ ಮೂವರು ಸ್ನೇಹಿತರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಹೈದರಾಬಾದ್ ನ ಹೋಟೆಲ್ ವೊಂದರಲ್ಲಿ ನಡೆದಿದೆ.
ವಿದ್ಯಾರ್ಥಿನಿಯ ಸ್ನೇಹಿತ ಎಂ.ಜೋಸೆಫ್ ಆಕೆಯನ್ನು ಬರ್ತ್ ಡೇ ಪಾರ್ಟಿಗೆ ಕರೆಸಿದ್ದು ಆಕೆ ಪಾರ್ಟಿಗೆ ಹೋಗಿದ್ದಳು.
ಪಾರ್ಟಿಯಲ್ಲಿ ಮತ್ತು ಬರುವ ಪದಾರ್ಥ ಬೆರೆಸಿದ್ದ ಕೇಕ್ ತಿನ್ನಿಸಲಾಗಿದೆ. ಬಳಿಕ ಆಕೆಗೆ ಪ್ರಜ್ಞೆತಪ್ಪಿದ್ದು ಆ ವೇಳೆಗೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಎಚ್ಚರವಾದ ನಂತರ ಬೆದರಿಕೆ ಹಾಕಿದ ಆರೋಪಿಗಳು ಆಕೆಯನ್ನು ಕಳಿಸಿದ್ದಾರೆ. ಘಟನೆ ನಡೆದ ಒಂದೆರಡು ದಿನಗಳ ನಂತರ ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲಾಗಿ ತನ್ನ ತಾಯಿಗೆ ಮಾಹಿತಿ ನೀಡಿದ್ದು ಪೋಷಕರು ಜುಬಿಲಿ ಹಿಲ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ.
ನಂತರ ಕುಕಟಪಲ್ಲಿ ಪೊಲೀಸ್ ಠಾಣೆಗೆ ಕೇಸ್ ವರ್ಗಾವಣೆ ಮಾಡಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.