ಹೊಸದಿಲ್ಲಿ, ಅ. 17 (DaijiworldNews/HR): ಭಾರತದಲ್ಲಿ ಕೊರೊನಾ ಸೋಂಕು ಆರಂಭವಾದ ದಿನದಿಂದ ಇದೇ ಮೊದಲ ಬಾರಿಗೆ ಹದಿನೈದು ದಿನಗಳಲ್ಲಿ ಕೊರೊನಾ ಪ್ರಕರಣಗಳ ಇಳಿಕೆ ಪ್ರಮಾಣ ಗರಿಷ್ಠವಾಗಿದೆ.
ದೇಶದಲ್ಲಿ ಅಕ್ಟೋಬರ್ ನಲ್ಲಿ ಶೇಕಡ 18ರಷ್ಟು ಕೊರೊನಾ ಸೋಂಕಿನ ಸಂಖ್ಯೆ ಕಡಿಮೆಯಾಗಿದ್ದು, ಇದೇ ಅವಧಿಯಲ್ಲಿ ಸಾವಿನ ಸಂಖ್ಯೆ ಶೇಕಡ 19ರಷ್ಟು ಕಡಿಮೆಯಾಗಿದೆ.
ಇನ್ನು ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಇದು ಸತತ ಎರಡನೇ ಬಾರಿ. ಸೆಪ್ಟಂಬರ್ 16-30ರ ಅವಧಿಯಲ್ಲಿ ಕೂಡಾ ಹೊಸ ಪ್ರಕರಣಗಳ ಸಂಖ್ಯೆ ಹಿಂದಿನ ಪಾಕ್ಷಿಕಕ್ಕೆ ಹೋಲಿಸಿದರೆ 2.9% ಕಡಿಮೆಯಾಗಿತ್ತು.
ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಕೂಡಾ ಇದೇ ಪ್ರವೃತ್ತಿ ಕಂಡುಬಂದಿದೆ. ಅಕ್ಟೋಬರ್ ಮೊದಲಾರ್ಧದಲ್ಲಿ 13,474 ಮಂದಿ ಮೃತಪಟ್ಟಿದ್ದು, ಇದು ಹಿಂದಿಗೆ ಹೋಲಿಸಿದರೆ ಶೇಕಡ 18.9ರಷ್ಟು ಕಡಿಮೆಯಾಗಿದೆ.