ಮೈಸೂರು, ಅ. 17 (DaijiworldNews/MB) : ''ಕೊರೊನಾ ವಿರುದ್ದದ ಹೋರಾಟದಲ್ಲಿ ಮೃತರಾದ ಕೊರೊನಾ ವಾರಿಯರ್ಗಳನ್ನು ಹುತಾತ್ಮರೆನ್ನಿ'' ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಶನಿವಾರ ಹೇಳಿದರು.
ನಾಡಹಬ್ಬ ದಸರಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ''ದೇಶದ ರಕ್ಷಣೆ ಮಾಡುವ ಯೋಧರು ಮೃತಪಟ್ಟರೆ ಹುತಾತ್ಮ ಯೋಧರೆಂದು ಗೌರವಿಸುವಂತೆ, ಹಾಗೆಯೇ ಮೃತಪಟ್ಟ ಕೊರೊನಾ ಯೋಧರಿಗೂ ಅದೇ ಗೌರವ ಸಲ್ಲಬೇಕು. ಕೊರೊನಾ ವಿರುದ್ದದ ಹೋರಾಟದಲ್ಲಿ ಮೃತರಾದ ವಾರಿಯರ್ಗಳನ್ನು ಹುತಾತ್ಮರೆನ್ನಬೇಕು. ಮೃತಪಟ್ಟವರ ಕುಟುಂಬಕ್ಕೆ ಹಾಗೂ ಹೋರಾಟದಲ್ಲಿ ನಿರತರಾದವರಿಗೆ ಪ್ರಶಂಸಾ ಪತ್ರ ನೀಡಬೇಕು'' ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ದಸರಾದ ಇತಿಹಾಸದಲ್ಲೇ ವೈದ್ಯರೊಬ್ಬರಿಗೆ ಸರಾ ಉದ್ಘಾಟನೆಯ ಭಾಗ್ಯ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸಿದ ಅವರು ದೇಶದಲ್ಲಿ 550ಕ್ಕೂ ಹೆಚ್ಚು ವೈದ್ಯರು 700 ಕ್ಕೂ ಹೆಚ್ಚು ನರ್ಸ್ಗಳು ಮೃತಪಟ್ಟಿದ್ದು ಅವರೆಲ್ಲರಾ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನ ದೇವಿ ಚಾಮುಂಡಿ ನೀಡಲೆಂದು ಪ್ರಾರ್ಥಿಸಿದರು.