ಬೆಂಗಳೂರು,ಅ. 17 (DaijiworldNews/HR): ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ನಟಿ ರಾಗಿಣಿ ದ್ವಿವೇದಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಮತ್ತೊಮ್ಮೆ ನ್ಯಾಯಾಲಯ ಮುಂದೂಡಿದೆ.
ನಟಿ ರಾಗಿಣಿ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದು, ಇಂದು ವಿಚಾರಣೆ ನಡೆಸಿದ ನ್ಯಾಯಪೀಠ ಸಿಸಿಬಿ ಪರಎಸ್ಪಿಪಿಗೆ ನೋಟಿಸ್ ನೀಡಿ ಅಕ್ಟೋಬರ್ 23ಕ್ಕೆ ವಿಚಾರಣೆ ಮುಂದೂಡಿದೆ.
ರಾಗಿಣಿ ದ್ವಿವೇದಿ ಪರ ವಾದ ಮಂಡಿಸಿದ ವಕೀಲ ಮಹಮ್ಮದ್ ತಾಕೀರ್ ನಟಿಗೆ ಜಾಮೀನು ನೀಡುವಂತೆ ಕೋರಿದ್ದರು.ಆದರೆ ಎನ್ಡಿಪಿಎಸ್ ವಿಶೇಷ ನ್ಯಾಯಾಲಯ ಅರ್ಜಿಯ ವಿಚಾರಣೆಯನ್ನ ಅಕ್ಟೋಬರ್ 23ಕ್ಕೆ ಮುಂದೂಡಿದೆ. ಹಾಗಾಗಿ ನಟಿ ರಾಗಿಣಿ ಮುಂದಿನ ವಾರದವರೆಗೂ ಪರಪ್ಪನ ಆಗ್ರಹಾರದಲ್ಲಿಯೇ ಇರುವಂತಾಗಿದೆ.