ಚಿತ್ರದುರ್ಗ,ಅ. 17 (DaijiworldNews/HR): ಪ್ರಧಾನಿ ಮೋದಿ ಅವರ ದೇಶ ಮತ್ತು ಪ್ರಜೆಗಳಿಗೆ ಅಚ್ಛೆ ದಿನ್ ಬರಲಿದೆ ಎಂಬ ಮಾತು ಕೇವಲ ಕನಸಾಗಿಯೇ ಉಳಿಯಲಿದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಭಾರತವು ಆರ್ಥಿಕ ಸಂಕಷ್ಟದಲ್ಲಿ ಇರುವುದಕ್ಕೆ ಕೊರೊನಾ ಕಾರಣವಲ್ಲ, ಇದರಲ್ಲಿ ಬಹುಪಾಲು ಪ್ರಧಾನಿ ಅವರು ತೆಗೆದುಕೊಂಡ ತಪ್ಪು ನಿರ್ಧಾರಗಳೇ ಕಾರಣ. ಬಿಜೆಪಿಯಿಂದ ದೇಶ ಹಾಳಾಗುತ್ತಿದೆ. ಮೋದಿ ದೇಶದ ಅಭಿವೃದ್ಧಿ ಸಾಧಿಸುವ ಬದಲು ಕುಂಠಿತಗೊಳಿಸಲು ಮುಂದಾಗಿದ್ದಾರೆ ಎಂದರು.
ಇನ್ನು ನುಡಿದಂತೆ ನಡೆಯುವಲ್ಲಿ ಮೋದಿ ಸಂಪೂರ್ಣ ಸೋತಿದ್ದು, ಉದ್ಯೋಗ ಸೃಷ್ಟಿಸುವಲ್ಲಿಯೂ ವಿಫಲರಾಗಿದ್ದಾರೆ. ಬರೀ ಮಾತುಗಳಿಂದಲೇ ಜನರ ಹೊಟ್ಟೆ ತುಂಬಿಸುವ ಕಲೆಯನ್ನು ಹೊಂದಿದ್ದಾರೆ ಎಂದರು.