ಬೆಂಗಳೂರು, ಅ. 17 (DaijiworldNews/SM): ಅಧಿಕಾರಕ್ಕೇರಿದ ಬಳಿಕ ಅಸಹಾಯಕತೆ ತೋಡಿಕೊಳ್ಳುವವರು ನಾಲಾಯಕರು. ಅದಂತೆ ರಾಜ್ಯದಲ್ಲಿರುವ ಬಿಜೆಪಿ ಸರಕಾರ ಅಧಿಕಾರ ನಡೆಸುವ ಬದಲು ಅಸಹಾಯಕತೆ ಹೊರಹಾಕುತ್ತಿದ್ದು, ಸರಕಾರ ಇದ್ದರೆಷ್ಟು ಹೋದರೆಷ್ಟು ಎಂದು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಬಡವರು, ವಲಸೆ ಕಾರ್ಮಿಕರಿಗೆ ಅನುಕೂಲವಾಗಲಿ ಎಂಬ ಕಾರಣದಿಂದಾಗಿ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿತ್ತು. ಆದರೆ, ಇದೀಗ ರಾಜ್ಯ ಸರಕಾರ ಅವುಗಳನ್ನು ಮುಚ್ಚಲು ಹೊರಟಿದ್ದು, ರಾಜ್ಯ ಸರಕಾರದ ನಿರ್ಧಾರ ಖಂಡಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.
ದುಡ್ಡಿಲ್ಲ, ಕೊರೋನಾ ಇದೆ ಅಂತ ಜನರ ಮುಂದೆ ಸರಕಾರ ಅಸಹಾಯಕತೆ ತೋಡಿಕೊಳ್ಳಬಾರದು. ಆಡಳಿತ ನಡೆಸುವವರೇ ಅಸಹಾಯಕತೆ ತೋರಿದ್ದಲ್ಲಿ ರಾಜ್ಯದ ಜನತೆಯ ಪಾಡೇನು? ಅದರ ಬದಲು ಅಧಿಕಾರ ಬಿಟ್ಟು ತೊಲಗಲಿ. ಹಸಿದವರಿಗೆ ಅನ್ನ ಹಾಕಲು ಆಗಾದ ಸರ್ಕಾರ ಅಗತ್ಯವಿದೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.