ನವದೆಹಲಿ,ಅ.18 (DaijiworldNews/HR): ಭಾರತೀಯ ರಕ್ಷಣಾ ಪಡೆ ಯುದ್ಧಕ್ಕೆ ಯಾವಾಗಲೂ ಸಿದ್ಧವಾಗಿದ್ದು, ಭಾರತದ ಸಾರ್ವಭೌತ್ವ ಹಾಗೂ ಗಡಿಯನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ.
ಭಾರತದ ಗಡಿಯಲ್ಲಿ ಜಗಳಕ್ಕೆ ನಿಂತಿರುವ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್, ನಿಮ್ಮ ಮನಸ್ಸು ಹಾ ಗೂ ಶಕ್ತಿಯನ್ನು ಯುದ್ಧಕ್ಕೆ ಸಿದ್ಧಪಡಿಸಿ ಎಂದು ಈಚೆಗಷ್ಟೇ ಹೇಳಿಕೆ ನೀಡಿದ್ದು, ಇದಕ್ಕೆ ಪ್ರತ್ಯುತ್ತರವಾಗಿ ಇದೀಗ ಅಮಿತ್ ಷಾ ಹೇಳಿಕೆ ನೀಡಿದ್ದು, ಭಾರತೀಯ ರಕ್ಷಣಾ ಪಡೆ ಯುದ್ಧಕ್ಕೆ ಯಾವಾಗಲೂ ಸಿದ್ಧವಾಗಿದೆ. ಭಾರತದ ಸಾರ್ವಭೌತ್ವ ಹಾಗೂ ಗಡಿಯನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.
ಈ ಹಿಂದೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜಿನ್ಪಿಂಗ್ ಯಾವುದೇ ದೇಶದೊಂದಿಗೆ ಚೀನಾ ಕೋಲ್ಡ್, ಹಾಟ್ ಯಾವುದೇ ಯುದ್ಧದ ಉದ್ದೇಶ ಹೊಂದಿಲ್ಲ ಎಂದಿದ್ದರು. ಆದರೆ ಇದೀಗ ಭಾರತದ ರಕ್ಷಣಾ ಪಡೆ ಯಾವುದೇ ಸಮಯದಲ್ಲಿ ಯುದ್ಧಕ್ಕೆ ಸಿದ್ಧವಾಗಿದೆ ಎಂದು ಸೂಚಿಸಿದೆ.