ಹೈದರಾಬಾದ್,ಅ.18 (DaijiworldNews/HR): ಭಾರಿ ಮಳೆಯಿಂದಾಗಿ ಗೋಲ್ಕೊಂಡಾ ಕೋಟೆ,ಮಕ್ಕಿ ದರ್ವಾಝದ ಆವರಣಗೋಡೆ ಕಳೆದ ಒಂದು ತಿಂಗಳಲ್ಲಿ ಎರಡನೇ ಬಾರಿಗೆ ಕುಸಿದಿದೆ.
ಭಾರಿ ಮಳೆಗೆ ಮಕ್ಕಿ ದರ್ವಾಝದ ಆವರಣಗೋಡೆಯ ಮೇಲು ತುದಿ ಕುಸಿದಿದೆ ಎಂದು ಪ್ರಾಚ್ಯವಸ್ತು ಸಂರಕ್ಷಣಾ ಹೋರಾಟಗಾರ ಮುಹಮ್ಮದ್ ಸೈಫುಲ್ಲಾ ಹೇಳಿದ್ದಾರೆ.
ಕಳೆದ ಕೆಲ ವಾರಗಳಿಂದ ಹೈದರಾಬಾದ್ನಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಹಾಗೂ ಪದೇ ಪದೇ ಮಕ್ಕಿ ದರ್ವಾಝದ ಕುಸಿಯುತ್ತಿರುವುದರಿಂದ ಇದರ ಸಂರಕ್ಷಣೆಗೆ ಒತ್ತು ನೀಡಬೇಕಾದ ಅಗತ್ಯವಿದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಇನ್ನು ಗೋಲ್ಕೊಂಡಾ ಕೋಟೆಯ ಎಂಟು ಪ್ರವೇಶ ದ್ವಾರಗಳ ಪೈಕಿ ಮಕ್ಕಿ ದರ್ವಾಝ ಪ್ರಮುಖ ದ್ವಾರವಾಗಿದ್ದು, ಇದರ ಬಾಗಿಲನ್ನು ಸಾಗುವಾನಿ ಮರದಿಂದ ಮಾಡಲಾಗಿದೆ. ಆನೆಗಳ ಮೇಲೆ ಸವಾರಿ ಮಾಡಿಕೊಂಡು ಮಾವುತರು ಹೋಗುವಷ್ಟು ದೊಡ್ಡದು ಎಂದು ತಿಳಿದು ಬಂದಿದೆ.