ಇಟಾನಗರ,ಅ.18 (DaijiworldNews/HR): ಭದ್ರತಾ ಪಡೆಗಳು ಎನ್ಎಸ್ಸಿಎನ್ ಉಗ್ರನನ್ನು ಹತ್ಯೆಗೈದ ಘಟನೆ ಅರುಣಾಚಲ ಪ್ರದೇಶದ ಲಾಂಗ್ಡಿಂಗ್ ಜಿಲ್ಲೆಯಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಖಚಿತ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಪೊಲೀಸರೊಂದಿಗೆ ಕಾರ್ಯಾಚರಣೆಯನ್ನು ಆರಂಭಿಸಿದ್ದವು. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಭದ್ರತಾ ಪಡೆಗಳು ಪ್ರತ್ಯುತ್ತರ ನೀಡಿದ್ದು, ಗುಂಡಿನ ಚಕಮಕಿಯಲ್ಲಿ ಒಬ್ಬ ಉಗ್ರ ಹತನಾಗಿದ್ದಾನೆ ಎಂದು ತೇಜ್ಪುರ ಮೂಲದ ರಕ್ಷಣಾ ಸಾರ್ವಜನಿಕ ಸಂಪರ್ಕಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಹರ್ಷ್ ವರ್ಧನ್ ಪಾಂಡೆ ಮಾಹಿತಿ ನೀಡಿದ್ದಾರೆ.
ಇನ್ನು ಭದ್ರತಾ ಪಡೆಗಳು ಲತೋಡ್ ಬಂಧೂಕು ಮತ್ತು ಮೂರು ಜೀವಂತ ಗುಂಡುಗಳು, ಚೈನಾ ನಿರ್ಮಿತ ಕೈ ಗ್ರೆನೇಡ್ ವಶಪಡಿಸಿಕೊಂಡಿಸಿಕೊಂಡಿದ್ದಾರೆ.