ನವದೆಹಲಿ, ಅ. 18 (DaijiworldNews/PY): ದೇಶದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ದ ಕೆಂಡಾಕಾರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಈ ಗ ನಡೆಯುತ್ತಿರುವುದು ಬೇಟಿ ಬಚಾವೋ ಅಲ್ಲ, ಅಪರಾಧಿ ಬಚಾವೋ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮೊದಲು ಬಿಜೆಪಿ ಆರಂಭಿಸಿದ್ದ ಬೇಟಿ ಬಚಾವೋ, ಆದರೆ, ಈಗ ನಡೆಯುತ್ತಿರುವುದು ಅಪರಾಧಿ ಬಚಾವೋ ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿ ಶಾಸಕ, ಅವರ ಪುತ್ರ ಸೇರಿದಂತೆ ಬೆಂಬಲಿಗರು, ಮಹಿಳೆಯೋರ್ವರ ಮೇಲೆ ದೌರ್ಜನ್ಯ ನಡೆಸಿದ ಆರೋಪಿಯನ್ನು ಪೊಲೀಸ್ ವಶದಿಂದ ಬಿಡಿಸಿದ ಪ್ರಕರಣಗಳ ಬಗ್ಗೆ ಮಾಡಿದ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.