ಲಕ್ನೋ ,ಅ.18 (DaijiworldNews/HR): ಉತ್ತರಪ್ರದೇಶದ ಬಲ್ಲಿಯಾದಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಧೀರೇಂದ್ರ ಸಿಂಗ್ ನನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದು, ಈತನ ಜೊತೆಗಿದ್ದ ಆರೋಪಿಗಳಾದ ಸಂತೋಷ್ ಯಾದವ್ ಮತ್ತು ಮರಜೀತ್ ಯಾದವ್ ಎಂಬವರನ್ನು ಉತ್ತರಪ್ರದೇಶ ವಿಶೇಷ ಪೊಲೀಸ್ ಪಡೆ ಲಕ್ನೋದ ಜನೇಶ್ವರ ಮಿಶ್ರಾ ಪಾರ್ಕ್ ನ ಬಳಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಅಕ್ಟೋಬರ್ 16ರಂದು ಪಡಿತರ ಅಂಗಡಿಗಳಲ್ಲಿ ಅಧಿಕಾರಿಗಳ ಕಾರ್ಯಕ್ರಮವುಂದರಲ್ಲಿ ನಡೆದ ಮಾತಿನ ಚಕಮಕಿಯಲ್ಲಿ ಓರ್ವನ ಕೊಲೆ ನಡೆದಿತ್ತು. ಬಲ್ಲಿಯಾ ಶೂಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ 10 ಮಂದಿಯನ್ನು ಬಂಧಿಸಲಾಗಿದೆ.
ಇನ್ನು ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳ ಸಮ್ಮುಖದಲ್ಲೇ ಬಿಜೆಪಿ ಕಾರ್ಯಕರ್ತ ಧೀರೇಂದ್ರ ಸಿಂಗ್ ಎಂಬಾತ ಜೈಪ್ರಕಾಶ್ ಎಂಬ ವ್ಯಕ್ತಿಗೆ ಗುಂಡು ಹಾರಿಸಿ ಹತ್ಯೆಗೈದಿದ್ದು, . ಈತ ಶಾಸಕ ಸುರೇಂದ್ರ ಸಿಂಗ್ ನಿಕಟವರ್ತಿ ಎಂದು ತಿಳಿದು ಬಂದಿತ್ತು.
ಘಟನೆಯ ಕುರಿತು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಆಕ್ರೋಶ ವ್ಯಕ್ತಪಡಿಸಿ, ಬಿಜೆಪಿ ಬಲ್ಲಿಯಾ ಶೂಟಿಂಗ್ ಪ್ರಕರಣದ ಆರೋಪಿ ತಪ್ಪಿಸಿಕೊಳ್ಳಲು ನೆರವಾಗುತ್ತಿದೆ ಎಂದಿದ್ದರು.