ಬೆಂಗಳೂರು, ಅ. 18 (DaijiworldNews/PY): ಮತದಾರರು ಈಗ ಮಲಗಬಾರದು. ಮಲಗಿದರೆ ನಮಗೆ ಲಾಸ್. ನೀವು ಎದ್ದಲ್ಲಿ ಮಾತ್ರವೇ ಅಭ್ಯರ್ಥಿ ಕೃಷ್ಣಮೂರ್ತಿ ಪಾಸ್, ಆಗಲೇ ಕುಮಾರಸ್ವಾಮಿ ಕರ್ನಾಟಕ್ಕೆ ಬಾಸ್ ಎಂದು ಮಾಜಿ ಪರಿಷತ್ ಸದಸ್ಯ ಟಿ.ಎ.ಶರವಣ ಹೇಳಿದ್ದಾರೆ.
ಲಗ್ಗರೆಯಲ್ಲಿನ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಿಂಹ ಬಂದರೆ ಘರ್ಜನೆ ಇರುತ್ತದೆ. ಚಿರತೆ ಬಂದರೆ ವೇಗ ಇರುತ್ತದೆ. ಹುಲಿ ಬಂದರೆ ಗಾಂಭೀರ್ಯ ಇರುತ್ತದೆ. ಆದರೆ, ಕುಮಾರಣ್ಣ ಬಂದರೆ ಎಲ್ಲಾ ಇರುತ್ತದೆ. ಬಂಡೆ ಎಲ್ಲಿಯೋ ನಿಂತು ಯಾವುದೋ ಹೇಳಿಕೆ ನೀಡುತ್ತದೆ. ಆದರೆ, ಜೆಡಿಎಸ್ ಅನ್ನು ಯಾರಿಂದಲೂ ಮುಗಿಸಲು ಅಸಾಧ್ಯ ಎಂದು ಡಿಕೆಶಿಗೆ ಟಾಂಗ್ ಕೊಟ್ಟಿದ್ದಾರೆ.
ಆರ್.ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರು ಮುನಿರತ್ನ ಅಲ್ಲ, ಮನಿ ರತ್ನ. ಅವರು ಹೆಣ್ಣು ಮಗಳ ಸೀರೆ ಎಳೆದ ದುಷ್ಯಾಸನ ಇದ್ದಂತೆ. ದುಷ್ಯಾಸನನ ರೀತಿಯಲ್ಲೇ ಕಾರ್ಪೋರೇಟರ್ ಸೀರೆ ಎಳೆದಿದ್ದು ಎಂದಿದ್ದಾರೆ.
ಸಿದ್ದರಾಮಯ್ಯ ಅವರು ಜೆಡಿಎಸ್ ಎಲ್ಲಿದೆ ಎದು ಹೇಳುತ್ತಾರೆ. ಎಷ್ಟು ಬಾರಿ ನಿಮಗೆ ಜೆಡಿಎಸ್ ಎಲ್ಲಿದೆ ಎಂದು ತೋರಿಸಬೇಕು? ಜೆಡಿಎಸ್ ಎಲ್ಲಿದೆ ಎನ್ನುವುದನ್ನು ಈ ಹಿಂದೆ ಚಾಮುಂಡೇಶ್ವರಿಯಲ್ಲಿ ತೋರಿಸಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.