ನವದೆಹಲಿ, ಅ. 18 (DaijiworldNews/PY): ಭಾರತೀಯ ನೌಕಾಪಡೆ ದೇಶೀಯವಾಗಿ ಅಭಿವೃದ್ದಿಪಡಿಸಿರುವ ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಕ್ಷಿಪಣಿಯು ಅತ್ಯಂತ ಸಂಕೀರ್ಣ ಹಾಗೂ ಕುಶಲ ತಂತ್ರಜ್ಞಾನ ಹೊಂದಿದೆ. ಇದನ್ನು ಐಎನ್ಎಸ್ ಚೆನ್ನೈನಿಂದ ಪರೀಕ್ಷಾರ್ಥವಾಗಿ ಹಾರಿಸಲಾಯಿತು.
ಈ ಕ್ಷಿಪಣಿಯು ನೌಕಾ ಮೇಲ್ಮೈ ಗುರಿಗಳನ್ನು ದೀರ್ಘ ವ್ಯಾಪ್ತಿಯಲ್ಲಿ ತೊಡಗಿಸಿಕೊಳ್ಳಲಿದೆ. ಅಲ್ಲದೇ, ನೌಕಾಪಡೆಯ ವಿಧ್ವಂಸಕ ಕೃತ್ಯವನ್ನು ನಿಯಂತ್ರಿಸುವ ಅಸ್ತ್ರವಾಗಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಈ ಸಾಧನೆಗಾಗಿ ಡಿಆರ್ಡಿಒ, ಬ್ರಹ್ಮೋಸ್ ಏರೋಸ್ಪೇಸ್ ಹಾಗೂ ಭಾರತೀಯ ನೌಕಾಪಡೆಯ ಸಿಬ್ಬಂದಿಗಳನ್ನು ರಕ್ಷಣ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದ್ದಾರೆ.
ಭಾರತ ಹಾಗೂ ರಷ್ಯಾ ಜಂಟಿಯಾಗಿ ಬ್ರಹ್ಮೋಸ್ ಏರೋಸ್ಪೇಸ್, ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ತಯಾರು ಮಾಡುತ್ತದೆ. ಇವುಗಳನ್ನು ಜಲಾಂತರ್ಗಾಮಿ ನೌಕೆಗಳು, ಹಡಗುಗಳಿಂದ ಉಡಾವಣೆ ಮಾಡಬಹುದಾಗಿದೆ.