ನವದೆಹಲಿ, ಅ. 19 (DaijiworldNews/PY): ಹಬ್ಬದ ಅವಧಿಯ ಸಲುವಾಗಿ ಬೇಡಿಕೆ ಪೂರೈಸಲು ಭಾರತೀಯ ರೈಲ್ವೆ ಅ.20ರಿಂದ ನ.30ರವರೆಗೆ 416 ವಿಶೇಷ ರೈಲುಗಳನ್ನು ಓಡಿಸಲು ಸಜ್ಜಾಗಿದೆ.
ಸಾಂದರ್ಭಿಕ ಚಿತ್ರ
ವಿಶೇಷವಾಗಿ ಕಾರ್ಯಾಚರಿಸಲಿರುವ 416 ರೈಲುಗಳು ಅ.20ರಿಂದ ನ.30ರವರೆಗೆ ಕೋಲ್ಕತ್ತಾ, ಪಾಟ್ನಾ, ವಾರಣಾಸಿ, ಲಕ್ನೋ ಹಾಗೂ ಇತರ ಪ್ರಮುಖ ನಗರಗಳನ್ನು ಸಂಪರ್ಕಿಸಲಿವೆ.
ಸದ್ಯ 682 ವಿಶೇಷ ರೈಲುಗಳು ಹಾಗೂ 2 ಕ್ಲೋನ್ಡ್ ರೈಲುಗಳು ಕಾರ್ಯಾಚರಿಸುತ್ತಿವೆ. ದುರ್ಗಾ ಪೂಜೆ, ದಸರಾ, ದೀಪಾವಳಿ ಹಾಗೂ ಛಾತ್ ಪೂಜೆಯ ಹಿನ್ನೆಲೆ ಹೆಚ್ಚುತ್ತಿರುವ ಬೇಡಿಕೆಯನ್ನು ಈ ರೈಲುಗಳು ಪೂರೈಸಲಿವೆ.
ವಿಶೇಷ ರೈಲುಗಳ ಟಿಕೆಟ್ ದರವು ಸಾಮಾನ್ಯ ರೈಲಿಗೆ ಹೋಲಿಸುವುದಾದರೆ ಶೇ.10-30ರಷ್ಟು ಹೆಚ್ಚಾಗಲಿದೆ. ವಿಶೇಷ ರೈಲುಗಳ ಸಂಚಾರದ ವೇಳಾಪಟ್ಟಿಯನ್ನು ಆಯಾ ವ್ಯಾಪ್ತಿಯ ರೈಲ್ವೆ ನಿರ್ಧರಿಸುತ್ತವೆ. ರಾಜ್ಯ ಸರ್ಕಾರಗಳೊಂದಿಗೆ ರೈಲ್ವೆ ಸಂಪರ್ಕದಲ್ಲಿದ್ದು, ಟಿಕೆಟ್ ಬುಕ್ಕಿಂಗ್ ಮಾದರಿಯನ್ನು ಮೇಲ್ವೀಚಾರಣೆ ನಡೆಸಲಿದೆ ಎಂದು ಮಂಡಳಿ ತಿಳಿಸಿದೆ.
ನವೆಂಬರ್ನ ಮೊದಲ ವಾರದಲ್ಲಿ ಭಾರತೀಯ ರೈಲ್ವೆ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದು, ಹೆಚ್ಚಿನ ರೈಲುಗಳನ್ನು ಓಡಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.