ಮೈಸೂರು, ಅ. 19 (DaijiworldNews/MB) : ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಕೇಂದ್ರ, ರಾಜ್ಯ ಸರ್ಕಾರ ಪ್ರಯತ್ನಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವ, ಘಟಿಕೋತ್ಸವ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸೋಮವಾರ ಮಾತನಾಡಿದ ಅವರು, ಕೊರೊನಾ ಕಾರಣದಿಂದಾಗಿ ಹಲವು ನಿರ್ಬಂಧಗಳಿದ್ದರೂ ಕೂಡಾ ಈ ನವರಾತ್ರಿ ಆಚರಣೆಯೂ ಮಂಕಾಗಿಲ್ಲ. ಉತ್ಸಾಹಭರಿತವಾದ ಆಚರಣೆ ನಡೆಯುತ್ತಿದೆ. ಭಾರೀ ಮಳೆಯಿಂದಾಗಿ ಹಬ್ಬದ ಆಚರಣೆ ಕೊಂಚ ಮಂಕಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ನೆರೆ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡುವ ಯತ್ನ ಮಾಡುತ್ತದೆ. ಪ್ರವಾಹ ಪೀಡಿತ ಕುಟುಂಬಕ್ಕೆ ನನ್ನ ತೀವ್ರ ಸಹಾನುಭೂತಿಯಿದೆ ಎಂದು ಹೇಳಿದರು.