ನವದೆಹಲಿ, ಅ. 19 (DaijiworldNews/MB) : ರಾಷ್ಟ್ರೀಯ ಕಾಮಧೇನು ಆಯೋಗ (ಆರ್ಕೆಎ) ಬಿಡುಗಡೆ ಮಾಡಿರುವ ಮೊಬೈಲ್ ಫೋನ್ಗಳಿಂದ ಹೊರ ಬರುವ ರೇಡಿಯೇಷನ್ ಅನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುವ ಗೋವಿನ ಸಗಣಿಯಿಂದ ಮಾಡಿದ 'ಚಿಪ್' ಮೊಬೈಲ್ ರೇಡಿಯೇಷನ್ ಕಡಿಮೆ ಮಾಡುತ್ತದೆ ಎಂಬುದನ್ನು ಸಾಬೀತುಪಡಿಸಿ ಎಂದು 600ಕ್ಕೂ ಅಧಿಕ ವಿಜ್ಞಾನಿಗಳು ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷ ವಲ್ಲಭ ಭಾಯಿ ಕಥಿರಿಯಾ ಅವರಿಗೆ ಪತ್ರ ಬರೆದಿದ್ದಾರೆ.
''ಗೋವಿನ ಸಗಣಿಯಿಂದ ಮಾಡಿದ ಈ 'ಚಿಪ್' ರೋಗಗಳಿಂದ ರಕ್ಷಣೆ ನೀಡುತ್ತದೆ. ಇದು ಮೊಬೈಲ್ ರೇಡಿಯೇಷನ್ ಅನ್ನು ಕಡಿಮೆ ಮಾಡುತ್ತದೆ ಎಂದು ರಾಷ್ಟ್ರೀಯ ಕಾಮಧೇನು ಆಯೋಗ (ಆರ್ಕೆಎ) ಅಧ್ಯಕ್ಷ ವಲ್ಲಭಭಾಯ್ ಅವರು ಹೇಳಿದ್ದು ಆ ಚಿಪ್ನ್ನು ಬಿಡುಗಡೆ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಸುಮಾರು 600ಕ್ಕೂ ಅಧಿಕ ವಿಜ್ಞಾನಿಗಳು ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷ ವಲ್ಲಭ ಭಾಯಿ ಕಥಿರಿಯಾ ಅವರಿಗೆ ಪತ್ರ ಬರೆದಿದ್ದು ಯಾವ ವಿಜ್ಞಾನಿಗಳು, ಎಲ್ಲಿ ಪ್ರಯೋಗದ ಮೂಲಕ ಈ ವಿಚಾರವನ್ನು ಸಾಬೀತುಪಡಿಸಿದ್ದಾರೆ. ಇದರ ಪ್ರಮುಖ ಸಂಶೋಧಕರು ಯಾರು? ಈ ವರದಿಯನ್ನು ಎಲ್ಲಿ ಪ್ರಕಟನೆ ಮಾಡಲಾಗಿದೆ ಎಂದೆಲ್ಲಾ ಪ್ರಶ್ನಿಸಿದ್ದಾರೆ.