ನವದೆಹಲಿ, ಅ. 20 (DaijiworldNews/MB) : ಕೇಂದ್ರ ಸರ್ಕಾರದ ವಿರುದ್ದ ಸದಾ ವಾಗ್ದಾಳಿ ನಡೆಸುತ್ತಲ್ಲೇ ಇರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ದೇಶದ ಆರ್ಥಿಕತೆ ಹಾಗೂ ಕೊರೊನಾ ಪ್ರಸರಣ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ದ ಸಿಡಿಮಿಡಿಗೊಂಡಿದ್ದಾರೆ.
ರಾಹುಲ್ ಗಾಂಧಿಯವರು ಟ್ವೀಟರ್ನಲ್ಲಿ ಭಾರತದ ಜಿಡಿಪಿ 2020 ನೇ ಸಾಲಿನಲ್ಲಿ ಬಾಂಗ್ಲಾದೇಶ, ನೇಪಾಳಕ್ಕಿಂತ ಕಡಿಮೆ ಬಂದಿರುವ ಹಾಗೂ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಅಂಕಿ ಅಂಶಗಳಿರುವ ಐಎಂಎಫ್ನ ವರದಿಯೊಂದನ್ನು ಉಲ್ಲೇಖ ಮಾಡಿದ್ದು, ''ಆರ್ಥಿಕತೆಯನ್ನು ಸಂಪೂರ್ಣವಾಗಿ ನಾಶಪಡಿಸುವುದು ಹೇಗೆ ಹಾಗೂ ಗರಿಷ್ಠ ಸಂಖ್ಯೆಯ ಜನರಿಗೆ ತ್ವರಿತವಾಗಿ ಸೋಂಕು ಪ್ರಸರಣ ಮಾಡುವುದು ಹೇಗೆ'' ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಬಿಜೆಪಿ ಶಾಸಕ, ಅವರ ಪುತ್ರ ಸೇರಿದಂತೆ ಬೆಂಬಲಿಗರು, ಮಹಿಳೆಯೋರ್ವರ ಮೇಲೆ ದೌರ್ಜನ್ಯ ನಡೆಸಿದ ಆರೋಪಿಯನ್ನು ಪೊಲೀಸ್ ವಶದಿಂದ ಬಿಡಿಸಿದ ಪ್ರಕರಣಗಳ ಬಗ್ಗೆ ಮಾಡಿದ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿ ''ಬಿಜೆಪಿ ಆರಂಭಿಸಿದ್ದ ಬೇಟಿ ಬಚಾವೋ ಈಗ ಅಪರಾಧಿ ಬಚಾವೋ ಆಗಿದೆ'' ಎಂದು ಹೇಳಿದ್ದರು.