ಮೈಸೂರು, ಅ. 20 (DaijiworldNews/PY): ಸರ್ಕಾರವು, ಗ್ರಾಮೀಣ ಪ್ರದೇಶಗಳಿಗೆ ಟೆಲಿಮೆಡಿಸಿಲ್ ಸೌಲಭ್ಯವನ್ನು ಕೊಂಡೊಯ್ಯಲು ಎಲ್ಲಾ ರೀತಿಯಾದ ಯೋಜನೆಯನ್ನು ಹಾಕುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ್ ನಾರಾಯಣ ತಿಳಿಸಿದ್ದಾರೆ.
ಮೈಸೂರಿನಲ್ಲಿ ಕಂಪೆನಿಗೆ ಭೇಟಿ ನೀಡಿ ಉನ್ನತ ಮಟ್ಟದ ತಂಡದೊಂದಿಗೆ ಚರ್ಚೆ ನಡೆಸಿದ ಅವರು, ಸರ್ಕಾರಕ್ಕೆ ಕಂಪೆನಿಯು ಟೆಲಿಮೆಡಿಸಿನ್ ಸೌಲಭ್ಯವನ್ನು ವಿಸ್ತರಣೆ ಮಾಡುವ ಸಲುವಾಗಿ ಕಿಯೋನಿಕ್ಸ್ನ ಸಹಯೋಗದೊಂದಿಗೆ ದೂರ ಸಂಪರ್ಕ ಕೇಂದ್ರವನ್ನು ತೆರೆಯಲು ಬೆಂಬಲ ನೀಡುವಂತೆ ಕೋರಿತ್ತು. ಈ ಹಿನ್ನೆಲೆ ಟೆಲಿಮೆಡಿಸಿನ್ ಸೌಲಭ್ಯಗಳನ್ನು ಹಳ್ಳಿಗಳಿಗೆ ತಲುಪಿಸುವ ಈ ವಿಚಾರ ಸಂತಸ ತಂದಿದೆ ಎಂದಿದ್ದಾರೆ.
ಸರ್ಕಾರವು ಕೊರೊನಾ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತಿದೆ. ಅಲ್ಲದೇ, ಪಿಪಿಇ ಕಿಟ್ ಸೇರಿದಂತೆ ಮಾಸ್ಕ್, ಸ್ಯಾನಿಟೈಸರ್, ವೆಂಟಿಲೇಟರ್ಗಳ ಕೊರತೆಯಿಲ್ಲ. ಪ್ರಧಾನ ಮಂತ್ರಿ ಆತ್ಮ ನಿರ್ಭರ ಕಾರ್ಯಕ್ರಮದಡಿ ಸ್ಥಳೀಯವಾಗಿ ಇವುಗಳನ್ನು ತಯಾರು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಸರ್ಕಾರವು ಒಂದು ಲಕ್ಷ ವೆಂಟಿಲೇಟರ್ಗಳಿಗೆ ಆದೇಶ ನೀಡಿದ್ದು, ಇದರಲ್ಲಿ ಈಗಾಗಲೇ 35,000 ವೆಂಟಿಲೇಟರ್ಗಳನ್ನು ಸರಬರಾಜು ಮಾಡಲಾಗಿದೆ ಎಂದು ಹೇಳಿದ್ದಾರೆ.