ನವದೆಹಲಿ, ಅ. 20 (DaijiworldNews/PY): ನವೆಂಬರ್ನಲ್ಲಿ ನಡೆಯಲಿರುವ ಭಾರತ,ಜಪಾನ್,ಅಮೇರಿಕಾ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯಾ ನೌಕಾಪಡೆ ಕೂಡಾ ಭಾಗವಹಿಸುವುದಾಗಿ ತಿಳಿಸಿದೆ.
ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯಾ ಭಾಗವಹಿಸುವ ಮೂಲಕ ಚೀನಾಕ್ಕೆ ತಕ್ಕ ಪ್ರತ್ತ್ಯುತ್ತರ ನೀಡುವ ನಿರೀಕ್ಷೆಯಿದೆ.
ಭಾರತವು ಆಸ್ಟ್ರೇಲಿಯಾಕ್ಕೆ ಹಿಂದೂ ಮಹಾಸಾಗರ ಹಾಗೂ ಅರಬ್ಬಿ ಸಮುದ್ರದಲ್ಲಿ ನಡೆಯಲಿರುವ 'ಎಕ್ಸರ್ಸೈಸ್ ಮಲಬಾರ್ 2020'ರಲ್ಲಿ ಭಾಗವಹಿಸುವಂತೆ ಆಹ್ವಾನಿಸಿತ್ತು. ಈ ಹಿನ್ನೆಲೆ ಟೋಕಿಯೋದಲ್ಲಿ ನಾಲ್ಕು ರಾಷ್ಟ್ರಗಳ ವಿದೇಶಾಂಗ ಸಚಿವರ ಮಟ್ಟದ ಮಾತುಕತೆಯಾಗಿತದ್ದು, ಪರಸ್ಪರ ಸಹಕಾರ ಹೆಚ್ಚಿಸುವುದು ಈ ಮಾತುಕತೆಯ ಉದ್ದೇಶವಾಗಿತ್ತು. ಭಾರತ-ಚೀನಾ ನಡುವೆ ಗಡಿ ಸಂಘರ್ಷ ನಡೆಯುತ್ತಿದೆ. ಈ ಹಿನ್ನೆಲೆ ಭಾರತದೊಂದಿಗೆ ಸಮರಾಭ್ಯಾಸದಲ್ಲಿ ಭಾಗವಹಿಸಲು ಆಸ್ಟ್ರೇಲಿಯಾ ಮುಂದಾಗಿದೆ.
ಎಕ್ಸರ್ಸೈಸ್ ಮಲಬಾರ್ 2020ರಲ್ಲಿ ಆಸ್ಟ್ರೇಲಿಯಾ ರಕ್ಷಣಾ ಪಡೆಗೆ ಒಂದು ಮೈಲುಗಲ್ಲು ಸಾಧಿಸುವ ಅವಕಾಶವಿದೆ ಎಂದು ಆಸ್ಟ್ರೇಲಿಯಾ ರಕ್ಷಣಾ ಸಚಿವ ಹೇಳಿದ್ದಾರೆ.
ಚೀನಾದ ಸೈನ್ಯವು ಕಳೆದ ಕೆಲವು ವರ್ಷಗಳಿಂದ ಸಮುದ್ರದಲ್ಲಿ ತನ್ನ ಸೇನಾ ಬಲವನ್ನು ಹೆಚ್ಚುಗೊಳಿಸುತ್ತಿದ್ದು, ಇದನ್ನು ನಿಯಂತ್ರಿಸಲು ನಾಲ್ಕು ರಲ್ಲಿ ರಾಷ್ಟ್ರಗಳು ಸೇರಿ ಕ್ವಾಡ್ ಕೂಟ ರಚಿಸಿಕೊಂಡಿವೆ.