ಬೆಂಗಳೂರು, ಅ. 20 (DaijiworldNews/PY): ಕೊರೊನಾ ನಿರ್ವಹಣೆಗೂ ಕೆಂದ್ರದಿಂದ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಸಿಕ್ಕಿಲ್ಲ. ನಿಯಮಗಳ ಅನ್ವಯ ಕೊರೊನಾ ವಿಕೋಪಕ್ಕೂ ಎಸ್ಡಿಆರ್ಎಫ್ ನಿಧಿಯನ್ನೇ ಬಳಸಬೇಕು. ಹೀಗಿರುವಾಗ ಪ್ರಕೃತಿ ವಿಕೋಪಕ್ಕೆ ತೆಗೆದಿಟ್ಟಿರುವ ಮೊತ್ತವೆಷ್ಟು? ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಕೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಮೊನ್ನೆ ಸುರಿದ ಮಳೆ ಮತ್ತು ಪ್ರವಾಹಕ್ಕೆ ಒಟ್ಟು15ಸಾವಿರ ಕೋಟಿಗೂ ಹೆಚ್ಚು ನಷ್ಟವಾದ ಅಂದಾಜಿದೆ. ಆದರೆ ಆಗಸ್ಟ್ವರೆಗಿನ ನಷ್ಟಕ್ಕೆ ಕೇಂದ್ರ ಇನ್ನು ಪರಿಹಾರವೇ ಕೊಟ್ಟಿಲ್ಲ.ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರಕ್ಕೆ ಈಗ ಎಸ್ಡಿಆರ್ಎಫ್ ನಿಧಿಯೇ ಅನಿವಾರ್ಯ. ಹಾಗಾಗಿ ಎಸ್ಡಿಆರ್ಎಫ್ನಲ್ಲಿ ಇನ್ನೂ ಹಣವೆಷ್ಟಿದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಲಿ ಎಂದು ಆಗ್ರಹಿಸಿದ್ದಾರೆ
ಕೋವಿಡ್ ನಿರ್ವಹಣೆಗೂ ಕೆಂದ್ರದಿಂದ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಸಿಕ್ಕಿಲ್ಲ. ನಿಯಮಗಳ ಅನ್ವಯ ಕೋವಿಡ್ ವಿಕೋಪಕ್ಕೂ ಎಸ್ಡಿಆರ್ಎಫ್ ನಿಧಿಯನ್ನೇ ಬಳಸಬೇಕು. ರಾಜ್ಯ ಈಗಾಗಲೆ ಕೋವಿಡ್ ನಿರ್ವಹಣೆಗೆ ಎಸ್ಡಿಆರ್ಎಫ್ ನಿಧಿ ಖರ್ಚು ಮಾಡಿದೆ. ಹೀಗಿರುವಾಗ ಪ್ರಕೃತಿ ವಿಕೋಪಕ್ಕೆ ತೆಗೆದಿಟ್ಟಿರುವ ಮೊತ್ತವೆಷ್ಟು? ಎನ್ಡಿಆರ್ಎಫ್ನಡಿ ಬರಬೇಕಾದ ಪರಿಹಾರವೆಷ್ಟು ಎಂಬ ಮಾಹಿತಿ ನೀಡಲಿ ಎಂದು ಒತ್ತಾಯಿಸಿದ್ದಾರೆ.