ದೆಹಲಿ,ಅ. 20 (DaijiworldNews/HR): ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿ ತೆಲಂಗಾಣ ಜನ ಜೀವನ ಅಸ್ಥವ್ಯಸ್ಥಗೊಂಡಿದ್ದು, ಇದೀಗ ದೆಹಲಿ ಸರ್ಕಾರವು ಸಹಾಯ ಮಾಡಲು ಮುಂದಾಗಿದೆ.
ಈ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟ್ವೀಟ್ ಮಾಡಿದ್ದು, ತೆಲಂಗಾಣದ ಪ್ರವಾಹ ತತ್ತರಿಸಿದ್ದು, ದೆಹಲಿ ಸರ್ಕಾರ 15 ಕೋಟಿ ದೇಣಿಗೆ ನೀಡಲು ಮುಂದಾಗಿದೆ ಎಂದು ಹೇಳಿದ್ದಾರೆ.
ಇನ್ನು ಹೈದರಾಬಾದ್ನಲ್ಲಿ ಭೀಕರ ಪ್ರವಾಹ ಉಂಟಾಗಿದ್ದು, ದೆಹಲಿಯ ಜನರು ಹೈದರಾಬಾದ್ನ ನಮ್ಮ ಸಹೋದರ ಸಹೋದರಿಯರೊಂದಿಗೆ ನಿಲ್ಲಲಿದ್ದಾರೆ. ಪರಿಹಾರ ಕಾರ್ಯಗಳಿಗಾಗಿ ದೆಹಲಿ ಸರ್ಕಾರವು ತೆಲಂಗಾಣ ಸರ್ಕಾರಕ್ಕೆ 15 ಕೋಟಿ ರೂ ದೇಣಿಗೆ ನೀಡಲಿದೆ ಎಂದು ಹೇಳಿದ್ದಾರೆ.