ಚಂಡೀಗಢ, ಅ. 20 (DaijiworldNews/PY): ಪಂಜಾಬ್ನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಕೇಂದ್ರ ಸರ್ಕಾರದ ಮೂರು ಕೃಷಿ ಮಸೂದೆಗಳನ್ನು ವಿರೋಧಿಸುವ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಎಲ್ಲಾ ಪಕ್ಷಗಳು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಬದಿಗಿಟ್ಟು ಪಂಜಾಬ್ ಅನ್ನು ಉಳಿಸಬೇಕು. ಕೇಂದ್ರ ಸರ್ಕಾರದ ಮೂರು ಕೃಷಿ ಮಸೂದೆಗಳನ್ನು ವಿರೋಧಿಸುವ ನಿರ್ಣಯದ ಈ ಕ್ರಮ ಕೃಷಿ ಹಾಗೂ ರಾಜ್ಯದ ರೈತರ ರಕ್ಷಣೆಗಾಗಿ ಎಂದಿ ತಿಳಿಸಿದ್ದಾರೆ.
ಈ ವಿಚಾರವಾಗಿ ವಿವಿಧ ತಜ್ಞರೊಂದಿಗೆ ಚರ್ಚಿಸಿದ ನಂತರ ನಾನು ಕೃಷಿ ವಿರೋಧಿ ಕಾನೂನು ವಿರುದ್ದ ನಿರ್ಣಯ ಮಂಡನೆಗೆ ಸಹಿ ಹಾಕಿದ್ದೇನೆ. ಆದರೆ, ಭಾರತ ಸರ್ಕಾರ ಏನು ಮಾಡಲು ಬಯಸಿದೆ ಎನ್ನುವ ವಿಚಾರ ಗೊತ್ತಾಗುತ್ತಿಲ್ಲ ಎಂದಿದ್ದಾರೆ.