ನವದೆಹಲಿ, ಅ. 20 (DaijiworldNews/PY): ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಎಲ್ಲರಿಗೂ ನಮಸ್ಕಾರ, ಅ.7ರಿಂದ ನಾನು ಮಲಯಾಳಂನ ಜನ ಗಣ ಮನ ಚಿತ್ರದ ತೊಡಗಿಸಿಕೊಂಡಿದ್ದೆ. ಸಿನೆಮಾದ ಸೆಟ್ಗೆ ತೆರಳುವ ಮುನ್ನ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿದ್ದು, ಆ ವರದಿಯಲ್ಲಿ ನೆಗೆಟಿವ್ ಬಂದಿತ್ತು. ಆದರೆ, ದುರಾದೃಷ್ಟವಶಾತ್ ಚಿತ್ರೀಕರಣದ ಕೊನೆಯ ದಿನ ನಡೆಸಿದ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ನಾನು ಐಸೋಲೇಶನ್ನಲ್ಲಿದ್ದೇನೆ ಎಂದಿದ್ದಾರೆ.
ನನಗೆ ಸೋಂಕಿನ ಯಾವುದೇ ಲಕ್ಷಣಗಳಿಲ್ಲ. ಸದ್ಯ ನಾನು ಉತ್ತಮವಾಗಿದ್ದೇನೆ. ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಆದಷ್ಟು ಬೇಗನೇ ನಾನು ಚೇತರಿಸಿಕೊಳ್ಳುತ್ತೇನೆ. ಅಲ್ಲದೇ, ಶೀಘ್ರವೇ ನಾನು ಕೆಲಸಕ್ಕೆ ವಾಪಾಸ್ಸಾಗುತ್ತೇನೆ. ನಿಮ್ಮ ಪ್ರೀತಿ ಹಾಗೂ ಕಾಳಜಿಗೆ ಧನ್ಯವಾದ ಎಂದಿದ್ದಾರೆ.