ಭೋಪಾಲ್, ಅ. 21 (DaijiworldNews/HR): ಭಯೋತ್ಪಾದಕರನ್ನು ಬೆಳೆಸುವುದು ಮದರಸಾಗಳಲ್ಲಿಯೇ, ಹೀಗಾಗಿ ಮದರಸಾಗಳಿಗೆ ಹಣಕಾಸಿನ ನೆರವು ನೀಡುವುದನ್ನು ಸರ್ಕಾರ ನಿಲ್ಲಿಸಬೇಕು ಎಂದು ಮಧ್ಯಪ್ರದೇಶ ಸರ್ಕಾರದ ಸಚಿವೆ ಉಷಾ ಠಾಕೂರ್ ಹೇಳಿದ್ದಾರೆ.
ಈ ಕುರಿತು ಇಂಧೋರ್ ನಲ್ಲಿ ಮಾತನಾಡಿದ ಸಚಿವೆ, ಜಮ್ಮು ಕಾಶ್ಮೀರವನ್ನು ಭಯೋತ್ಪಾದಕ ಕಾರ್ಖಾನೆಯನ್ನಾಗಿ ಮಾಡಿದ್ದು, ರಾಷ್ಟ್ರೀಯತೆಯನ್ನು ಅನುಸರಿಸಲು ಸಾಧ್ಯವಾಗದ ಮದರಸಾಗಳು, ಸಮಾಜದ ಸಂಪೂರ್ಣ ಪ್ರಗತಿಗಾಗಿ ಮದರಸಾಗಳನ್ನು ದೇಶದಲ್ಲಿ ಅಸ್ತಿತ್ವದಲ್ಲಿರುವ ಶಿಕ್ಷಣ ವ್ಯವಸ್ಥೆಯೊಂದಿಗೆ ವಿಲೀನಗೊಳಿಸಬೇಕು. ನೀವು ಈ ದೇಶದ ಪ್ರಜೆಯಾಗಿದ್ದರೆ, ಉಗ್ರರು, ಭಯೋತ್ಪಾದಕರು ಮದರಸಾಗಳಲ್ಲಿ ಕಲಿತಿರುವುದನ್ನು ಗಮನಿಸಬಹುದು ಎಂದರು.
ಇನ್ನು ಸರ್ಕಾರವು ಸಾರ್ವಜನಿಕ ಹಣದಿಂದ ಧಾರ್ಮಿಕ ಶಿಕ್ಷಣವನ್ನು ಕಲಿಸಲು ಅವಕಾಶ ನೀಡುವುದಿಲ್ಲ, ಹಾಗಾಗಿ ಸರ್ಕಾರಿ ಮದರಸಾ, ಸಂಸ್ಕೃತ ಶಾಲೆಗಳನ್ನು ಮುಚ್ಚಿಸಲಾಗುವುದು. ಈ ನಿಟ್ಟಿನಲ್ಲಿ ನವೆಂಬರ್ ತಿಂಗಳಲ್ಲಿ ಸರ್ಕಾರ ಔಪಚಾರಿಕ ಅಧಿಸೂಚನೆ ಹೊರಡಿಸುವುದಾಗಿ ಅಸ್ಸಾಂ ಶಿಕ್ಷಣ ಮತ್ತು ಹಣಕಾಸು ಸಚಿವ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದರು.