ನವಹೆಹಲಿ,ಅ. 21 (DaijiworldNews/HR): ಭಾರತೀಯ ಸೇನೆಯಿಂದ ಪೂರ್ವ ಲಡಾಕ್ನ ಗಡಿ ಭಾಗದಲ್ಲಿ ಸೋಮವಾರ ಬಂಧಿಸಲ್ಪಟ್ಟ ಚೀನಿ ಸೈನಿಕನನ್ನು ಮಂಗಳವಾರ ರಾತ್ರಿ ಚೀನಾಕ್ಕೆ ಹಸ್ತಾಂತರ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಸಾಂಧರ್ಭಿಕ ಚಿತ್ರ
ಭಾರತೀಯ ಸೇನೆ ಕಾರ್ಪೊರಲ್ ವಾಂಗ್ ಯಾ ಲಾಂಗ್ ಎಂಬ ಚೀನಾ ಯೋಧನನ್ನು ಲಡಾಖ್ ನ ಡೆಮ್ಚೋಕ್ ನಲ್ಲಿ ನಿನ್ನೆ ಬೆಳಗ್ಗೆ ಬಂಧಿಸಿತ್ತು. ಬಂಧಿತ ಚೀನಾ ಸೈನಿಕನ ವಿಚಾರಣೆ ಪೂರ್ಣಗೊಂಡ ಬಳಿಕ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.
ಇನ್ನು ಚೀನೀ ಸೈನಿಕ ಗಡಿ ದಾಟಿದ್ದರೂ ಕೂಡ ಆತನಿಗೆ ವೈದ್ಯಕೀಯ ಸಹಾಯವಾದ ಆಮ್ಲಜನಕ, ಆಹಾರ, ಬೆಚ್ಚಗಿಡುವಂಥ ಬಟ್ಟೆ ನೀಡಲಾಗಿದೆ. ಲಡಾಖ್ನ ವಾತಾವರಣದಲ್ಲಿ ಲಾಂಗ್ನನ್ನು ಬಂಧಿಸಲಾಗಿರುವುದರಿಂದ ಈ ಎಲ್ಲಾ ಸೌಲಭ್ಯ ನೀಡಲಾಗಿದೆ ಎಂದು ಸೇನೆ ಹೇಳಿದೆ.