ಪಾಟ್ನಾ,ಅ. 21 (DaijiworldNews/HR): ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರ ಭರದಿಂದ ನಡೆಯುತ್ತಿದ್ದು, ಇದೀಗ ಮೂರು ವಿರೋಧಿ ನಾಯಕರು ಒಂದೆಡೆ ಸೇರಿದ್ದಾರೆ.
ತಮ್ಮ ಕಟ್ಟಾ ವಿರೋಧಿಗಳೆನಿಸಿರುವ ಚಿರಾಗ್ ಪಾಸ್ವಾನ್ ಮತ್ತು ತೇಜಸ್ವಿ ಯಾದವ್ ಜತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವೇದಿಕೆ ಹಂಚಿಕೊಂಡಿದ್ದು, ನಿತೀಶ್ ಕುಮಾರ್ ಅವರು ವಿರೋಧಿ ಮುಖಂಡರ ಜತೆ ಸಂಭಾಷಣೆಯಲ್ಲಿ ತೊಡಗಿದ್ದನ್ನು ಸಾವಿರಾರು ಕ್ಯಾಮೆರಾಗಳು ಸೆರೆ ಹಿಡಿದಿದ್ದವು.
ಇನ್ನು ನಿತೀಶ್ ಕುಮಾರ್ ಅವರು ಚಿರಾಗ್ ಜೊತೆ ಇದೇ ಮೊದಲು ಮಾತನಾಡಿದ್ದು ಎಂದು ಲೋಕ ಜನಶಕ್ತಿ ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ.
ಮಂಗಳವಾರ ಚಿರಾಗ್ ಪಾಸ್ವಾನ್ ಅವರು ನಿತೀಶ್ ಕುಮಾರ್ ಅವರ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಬೇಡಿದ್ದಾಗಿ ಪಕ್ಷದ ಕಚೇರಿ ಹೇಳಿಕೆ ನೀಡಿದ್ದು, ನಿತೀಶ್, ಚಿರಾಗ್ ಹಾಗೂ ತೇಜಸ್ವಿ ಯಾದವ್ ಒಟ್ಟಿಗೆ ಕುಳಿತ ವಿಡಿಯೊ ವೈರಲ್ ಆಗಿದೆ.