ಮುಂಬೈ, ಅ. 21 (DaijiworldNews/MB) : ಇತ್ತೀಚೆಗೆ ವಿವಾದಾತ್ಮಕ ಹೇಳಿಕೆಗಳಿಂದಲ್ಲೇ ಸುದ್ದಿಯಾಗುತ್ತಿರುವ ಬಾಲಿವುಡ್ ನಟಿ ಕಂಗನಾ ರಣಾವತ್ಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರ ಬೆದರಿಕೆ ಹಾಕಲಾಗಿದೆ ಎಂದು ವರದಿ ತಿಳಿಸಿದೆ.
ಒಡಿಸ್ಸಾ ಮೂಲದ ವಕೀಲರ ಫೇಸ್ ಬುಕ್ ಖಾತೆಯಿಂದ ಅತ್ಯಾಚಾರ ಬೆದಕರಿಕೆ ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಭಾರೀ ಆಕ್ಟಿವ್ ಆಗಿರುವ ಕಂಗನಾ ಅವರು ಕೆಲವು ದಿನಗಳ ಹಿಂದೆ ಕೋಮು ದ್ವೇಷ ಸೃಷ್ಟಿಸುವಂತಹ ಪೋಸ್ಟ್ ಒಂದನ್ನು ಮಾಡಿದ್ದು ಇದರ ವಿರುದ್ದವಾಗಿ ಅವರ ಮೇಲೆ ಎಫ್ಐಆರ್ ದಾಖಲಾಗಿದೆ. ಈ ಬಗ್ಗೆ ಕಂಗನಾ ಅವರು ಟ್ವೀಟ್ ಮೂಲಕ ತಿಳಿಸಿದ್ದರು. ಎಲ್ಲರೂ ನವರಾತ್ರಿ ಉಪವಾಸ ಮಾಡುತ್ತಿದ್ದಾರೆ. ನಾನು ಕೂಡಾ ಉಪವಾಸ ಮಾಡುತ್ತಿದ್ದೇನೆ. ಸಂಭ್ರಮದಲ್ಲಿದ್ದೇನೆ. ಆದರೆ ನನ್ನ ಮೇಲೆ ಈಗ ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದು ಇದಕ್ಕೆ ಒಡಿಸ್ಸಾ ಮೂಲದ ವಕೀಲರ ಫೇಸ್ ಬುಕ್ ಖಾತೆಯಿಂದ ಈಕೆಯನ್ನು ನಗರದ ಮಧ್ಯದಲ್ಲಿ ಅತ್ಯಾಚಾರ ಮಾಡಬೇಕು ಎಂದು ಬೆದರಿಕೆ ಹಾಕಲಾಗಿದೆ.
ಆದರೆ ಈ ವಕೀಲರು ಇದಾದ ಸ್ವಲ್ಪ ಸಮಯದಲ್ಲೇ ಮ್ಮ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ ಎಂದು ಇತರೆ ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದ್ದಾರೆ. ಇಂದು ನನ್ನ ಫೇಸ್ಬುಕ್ ಐಡಿ ಹ್ಯಾಕ್ ಆಗಿದ್ದು ಕೆಲವು ಅವಹೇಳನಕಾರಿ ಕಾಮೆಂಟ್ಗಳನ್ನು ಪೋಸ್ಟ್ ಮಾಡಲಾಗಿದೆ. ಯಾವುದೇ ಮಹಿಳೆಯರು ಅಥವಾ ಯಾವುದೇ ಸಮುದಾಯದ ಬಗ್ಗೆ ನನ್ನ ಅಭಿಪ್ರಾಯ ಅದಾಗಿಲ್ಲ. ನಾನು ತುಂಬಾ ಆಘಾತಕ್ಕೊಳಗಾಗಿದ್ದೇನೆ. ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ. ಯಾರ ಭಾವನೆಗಾದರೂ ಧಕ್ಕೆ ಉಂಟಾಗಿದ್ದಲ್ಲಿ ಕ್ಷಮೆ ಇರಲಿ. ನನ್ನ ಫೇಸ್ಬುಕ್ ಈಡಿ ಹ್ಯಾಕ್ ಮಾಡಲಾಗಿದೆ. ನಾನು ನಿಜವಾಗಿಯೂ ವಿಷಾದಿಸುತ್ತೇನೆ ಎಂದು ಹೇಳಿದ್ದು ತಮ್ಮ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ.