ಹುಬ್ಬಳ್ಳಿ, ಅ. 21 (DaijiworldNews/MB) : ಅಕ್ಟೋಬರ್ 24, 25 ರಂದು ನೆರೆಪಿಡಿತ ರಾಯಚೂರು, ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತೇನೆ. ಮುಖ್ಯಮಂತ್ರಿ ತರಹ ಮೇಲಿನಿಂದಲ್ಲೇ ವೈಮಾನಿಕ ಸಮೀಕ್ಷೆ ನಡೆಸಲ್ಲ. ಕಾರಲ್ಲಿ ಹೋಗಿ ಜನರ ಸಂಕಷ್ಟ ಆಲಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ರಾಜ್ಯ ಸರ್ಕಾರವು ನೆರೆ ಪೀಡಿತರಿಗೆ ಹೋದ ವರ್ಷದ ಪರಿಹಾರ ಧನವನ್ನೇ ಬಿಡುಗಡೆ ಮಾಡಿಲ್ಲ ಎಂದು ದೂರಿದ ಅವರು, ಈ ಬಾರಿಯೂ ಜನರು ಪ್ರವಾಹದಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ಜನರ ನೋವಿಗೆ ಸ್ಪಂಧಿಸಬೇಕಾಗಿದೆ. ನಾನು ಬಿಎಸ್ವೈನಂತೆ ವೈಮಾನಿಕ ಸಮೀಕ್ಷೆ ನಡೆಸಲ್ಲ. ಜನರೆಡೆಗೆ ಹೋಗುತ್ತೇನೆ ಎಂದು ಹೇಳಿದರು.
ಮುಖ್ಯಮಂತ್ರಿ ವೈಮಾನಿಕ ಸಮೀಕ್ಷೆ ನಡೆಸುವ ಕುರಿತು ಈ ಹಿಂದೆ ಹೇಳಿಕೆ ನೀಡಿದ್ದ ಸಿದ್ದರಾಮಯ್ಯನವರು, ಮುಖ್ಯಮಂತ್ರಿಯಾದವರು ವೈಮಾನಿಕ ಸಮೀಕ್ಷೆ ಎಂದು ಕೊಂಡು ವಿಮಾನದಲ್ಲಿ ಮೇಲೆಯಲ್ಲಿ ಸುತ್ತಾಡಿದರೆ ಜನರ ಕಷ್ಟ ತಿಳಿಯುತ್ತಾ? ಪ್ರವಾಹವಿದ್ದ ಸಂದರ್ಭ ಅಥವಾ ರಸ್ತೆಯಲ್ಲಿ ತೆರಳಲು ಸಾಧ್ಯವಿಲ್ಲದ ಸಂದರ್ಭದಲ್ಲಿ ವಿಮಾನದಲ್ಲಿ ಹೋಗಲಿ. ಅದು ಬಿಟ್ಟು ಹೀಗೆ ಮೇಲೆಯಿಂದ ವೈಮಾನಿಕ ಸಮೀಕ್ಷೆ ಎಂದು ನಡೆಸಿಕೊಂಡರೆ ಜನರ ಕಷ್ಟ ಹೇಗೆ ತಿಳಿಯುತ್ತೆ ಎಂದು ಪ್ರಶ್ನಿಸಿದ್ದರು.