ನವದೆಹಲಿ,ಅ. 21 (DaijiworldNews/HR): ರೈತರು ಬಲವಂತವಾಗಿ ತಾವು ಬೆಳೆದ ಭತ್ತವನ್ನು ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದು, ಅವರ ನೋವನ್ನು ಕೇಂದ್ರ ಸರ್ಕಾರ ಆಲಿಸುತ್ತಿಲ್ಲ ಎಂಬುದಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ವಾದ್ರಾ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಉತ್ತರ ಪ್ರದೇಶದ ಮೊಹಮ್ಮದಿ ಖಿರಿ ಮಂಡಿಯಲ್ಲಿ ಭತ್ತ ಖರೀದಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ರೈತರೊಬ್ಬರು ಮಾತನಾಡಿರುವ ವಿಡಿಯೊವನ್ನು ಅದರೊಂದಿಗೆ ಪೋಸ್ಟ್ ಮಾಡಿ, ರೈತರ ವಿರುದ್ಧವಾಗಿ ಉತ್ತರ ಪ್ರದೇಶ ಸರ್ಕಾರ ಕೃಷಿ ಕಾನೂನುಗಳ ಕುರಿತು ಸಮ್ಮೇಳನ ನಡೆಸುತ್ತಿದ್ದು, ರೈತರ ನೋವನ್ನು ಆಲಿಸುತ್ತಿಲ್ಲಎಂಬುದಾಗಿ ಟ್ವೀಟ್ ಮಾಡಿದ್ದಾರೆ.
ಇನ್ನು ಉತ್ತರ ಪ್ರದೇಶದ ಅನೇಕ ಕಡೆ ರೈತರು ಬಲವಂತವಾಗಿ ತಾವು ಬೆಳೆದ ಭತ್ತವನ್ನು ಕ್ವಿಂಟಲ್ಗೆ 1000 ದಿಂದ 1100 ಬೆಲೆಗೆ ಮಾರಾಟ ಮಾಡುತ್ತಿದ್ದು, ಒಂದು ಕ್ವಿಂಟಲ್ ಭತ್ತಕ್ಕೆ ಸರ್ಕಾರ 1860 ಬೆಂಬಲ ಬೆಲೆ ನಿಗದಿ ಮಾಡಿದೆ ಎಂದು ಹೇಳಿದ್ದಾರೆ.