ಪಾಟ್ನಾ,ಅ.22 (DaijiworldNews/HR): ಬಿಜೆಪಿಯ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಸೈಯದ್ ಶಹನ್ವಾಜ್ ಹುಸೇನ್ಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನಾನು ಕೊರೊನಾ ಪಾಸಿಟಿವ್ ರೋಗಿಗಳೊಂದಿಗೆ ಸಂಪರ್ಕಕ್ಕೆ ಬಂದಿದ್ದರಿಂದ ಕೊರೊನಾ ಪರೀಕ್ಷೆಗೆ ಒಳಗಾಗಲು ನಿರ್ಧರಿಸಿದ್ದು, ಇದೀಗ ವರದಿ ಪಾಸಿಟಿವ್ ಬಂದಿದೆ. ಮುನ್ನೆಚ್ಚರಿಕಾ ಕ್ರಮವಾಗಿ, ನನ್ನನ್ನು ಏಮ್ಸ್ನಲ್ಲಿ ದಾಖಲಿಸಿ, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಬೇಗ ಗುಣಮುಖವಾಗುವೆ. ಆತಂಕ ಪಡುವ ವಿಚಾರ ಏನೂ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಹುಸೇನ್ ಅವರೆ ಪ್ರಚಾರಕರಾಗಿದ್ದಾರೆ.