ಬಳ್ಳಾರಿ, ಅ. 22 (DaijiworldNews/MB) : ''ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಬಿಎಸ್ ಯಡಿಯೂರಪ್ಪ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯನವರು ನನಗೆ ಜೂನಿಯರ್ಸ್, ಆದರೂ ಕೂಡಾ ಅವರು ಮುಖ್ಯಮಂತ್ರಿಯಾದರು. ನಮ್ಮ ಹಣೆಬರಹವೇ ಇಷ್ಟು'' ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಅವರು, ''ಜೆಡಿಎಸ್ ಅಭ್ಯರ್ಥಿ ಶಿಕ್ಷಕರಾಗಿದ್ದು ಪ್ರಜ್ಞಾವಂತರೆಲ್ಲರೂ ಅವರಿಗೆ ಮತ ನೀಡಿ ಗೆಲ್ಲಿಸಬೇಕು'' ಎಂದು ಮನವಿ ಮಾಡಿದ್ದಾರೆ.
ಹಾಗೆಯೇ ''ಹಿಂದಿನ ಜನತಾ ಪರಿವಾರದಂತೆ ಆಗಬೇಕು. ಆದರೆ ಇಂದು ಆಗಿರುವ ರಾಜಕೀಯ ಇಲ್ಲ. ಈಗ ದುಡ್ಡು ಕೊಟ್ಟು ಜನರನ್ನು ಸೇರಿಸುತ್ತಾರೆ ಎಂದು ಹೇಳಿದ ಅವರು, ಯಡಿಯೂರಪ್ಪ, ಸಿದ್ದರಾಮಯ್ಯ ನನಗಿಂತಲೂ ಜೂನಿಯರ್ಸ್ ಆದರೆ ಅವರು ಅದೃಷ್ಟದಿಂದ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ನಮ್ಮ ಹಣೆಬರಹವೇ ಇಷ್ಟು'' ಎಂದಿದ್ದಾರೆ.