ಪಟ್ನಾ, ಅ. 22 (DaijiworldNews/MB) : ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಪ್ರಣಾಳಿಕೆಯನ್ನು ಕೇಂದ್ರ ಹಣಕಾಸು ಸಚಿವೆ, ಬಿಜೆಪಿ ನಾಯಕಿ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಬಿಡುಗಡೆಗೊಳಿಸಿದ್ದಾರೆ. ಈ ಪ್ರಣಾಳಿಕೆಯಲ್ಲಿ ಬಿಜೆಪಿಯು ರಾಜ್ಯದ ಪ್ರತಿಯೊಬ್ಬರಿಗೂ ಉಚಿತ ಕೊರೊನಾ ಲಸಿಕೆ ಹಾಗೂ ಬಿಹಾರದ 19 ಲಕ್ಷ ಜನರಿಗೆ ಉದ್ಯೋಗ ನೀಡುವ ಭರವಸೆಯನ್ನು ನೀಡಿದೆ.
ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ವಿತ್ತ ಸಚಿವೆ, ಬಿಜೆಪಿ ನಾಯಕಿ ನಿರ್ಮಲಾ ಸೀತಾರಾಮನ್ ಅವರು ರಾಜಕೀಯವಾಗಿ ಸೂಕ್ಷ್ಮಮತಿಗಳನ್ನು ಹಾಗೂ ಸುಶಿಕ್ಷಿತರನ್ನು ಹೊಂದಿರುವ ರಾಜ್ಯ ಬಿಹಾರವಾಗಿದ್ದು ಚುನಾವಣೆಯ ಸಂದರ್ಭದಲ್ಲಿ ಪಕ್ಷಗಳು ನೀಡುವ ಭರವಸೆಗಳ ಬಗ್ಗೆ ಅವರಿಗೆ ಅರಿವು ಇರುತ್ತದೆ. ನಾವು ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ. ಹಾಗಾಗಿ ಈ ಪ್ರಣಾಳಿಕೆಯ ಬಗ್ಗೆ ಯಾರೇ ಏನೇ ಪ್ರಶ್ನೆ ಮಾಡಿದರೂ ನಾವು ದೃಢತೆ ಹಾಗೂ ವಿಶ್ವಾಸದಿಂದ ಪ್ರತಿಕ್ರಿಯಿಸುತ್ತೇವೆ ಎಂದು ಹೇಳಿದರು.
ರಾಜ್ಯದ ಜಿಡಿಪಿ ಶೇ.3 ರಿಂದ 11.3 ಕ್ಕೆ ಏರಿಕೆ ಕಂಡಿರುವುದು ಎನ್ಡಿಎ ಸರ್ಕಾರದ ಅವಧಿಯಲ್ಲಿ ಬದಲಾಗಿ 15 ವರ್ಷಗಳ ಜಂಗಲ್ ರಾಜ್ ಆಡಳಿತದಿಂದಾಗಿ ಅಲ್ಲ ಎಂದು ಹೇಳಿದ್ದಾರೆ.