ಭೋಪಾಲ್, ಅ. 22 (DaijiworldNews/MB) : ಮದ್ಯದ ಅಮಲಿನಲ್ಲಿ ತಾಯಿಗೆ ಬೈದು, ಹೊಡೆದ ತಂದೆಯ ವಿರುದ್ದ ಆಕ್ರೋಶಗೊಂಡ 16 ರ ಬಾಲಕಿ ಮರದ ಬ್ಯಾಟ್ನಿಂದ ತಂದೆಗೆ ಹೊಡೆದು ಹತ್ಯೆಗೈದು ಬಳಿಕ ಪೊಲೀಸರಿಗೆ ಕರೆ ಮಾಡಿ ಶರಣಾಗಿರುವ ಘಟನೆ ಭೋಪಾಲ್ ನಲ್ಲಿ ನಡೆದಿದೆ.
ತನ್ನ 45 ವರ್ಷದ ತಂದೆಯು ಪ್ರತಿದಿನ ತನ್ನ ತಾಯಿಗೆ ಹೊಡೆಯುತ್ತಿದ್ದ ಕಾರಣದಿಂದಾಗಿ ಬೇಸತ್ತ ಈ ಬಾಲಕಿ ಬಟ್ಟೆ ತೊಳೆಯಲು ಬಳಸಲಾಗುವ ಕಬ್ಬಿಣದ ರಿಂಗ್ಗಳು ಇದ್ದ ಮರದ ಬ್ಯಾಟ್ನಿಂದ ಹೊಡೆದಿದ್ದಾಳೆ ಎಂದು ವರದಿ ತಿಳಿಸಿದೆ.
ಈ ಘಟನೆ ನಡೆಸ ಬಳಿಕ ಪೊಲೀಸರಿಗೆ ಸ್ವತಃ ಬಾಲಕಿಯೇ ಕರೆ ಮಾಡಿ ತನ್ನ ತಂದೆಯನ್ನು ಕೊಂದಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಬೇರಾಸಿಯಾ ಉಪವಿಭಾಗದ ಪೊಲೀಸ್ ಅಧಿಕಾರಿ ಕೆ ಕೆ ವರ್ಮಾ ಅವರು, ಬಾಲಕಿಯ ತಂದೆಯು ನಿರುದ್ಯೋಗಿಯಾಗಿದ್ದು ಹಿರಿಯ ಮಗನ ಆದಾಯದಲ್ಲೇ ಈ ಕುಟುಂಬ ಜೀವನ ಸಾಗಿಸುತ್ತಿದೆ. ಈತ ಹಿರಿಯ ಮಗನ ವಿವಾಹದ ವಿಚಾರವಾಗಿ ಪತ್ನಿಗೆ ಹೊಡೆಯುತ್ತಿದ್ದಾಗ ಆಕ್ರೋಶಗೊಂಡ ಪುತ್ರಿ ಬ್ಯಾಟ್ನಿಂದ ಹೊಡೆದು ಹತ್ಯೆಗೈದಿದ್ದಾಳೆ ಎಂದು ತಿಳಿಸಿದ್ದಾರೆ.