ಬೆಂಗಳೂರು, ಅ. 23 (DaijiworldNews/HR): ಡಿ.ಜೆ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಸ್ಬುಕ್ ಪೋಸ್ಟ್ ಪ್ರಕಟಿಸಿದ ಆರೋಪಿ ಪಿ. ನವೀನ್ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.
ನವೀನ್ ಯಾವುದೇ ಕೆಟ್ಟ ಉದ್ದೇಶದಿಂದ ತನ್ನ ಫೇಸ್ಬುಕ್ನಲ್ಲಿ ಗಲಭೆಗೆ ಕಾರಣವಾದ ಪೋಸ್ಟ್ ಹಾಕಿರಲಿಲ್ಲ, ತನಗೆ ಆನ್ಲೈನ್ನಲ್ಲಿ ಬಂದಿದ್ದನ್ನು ಫಾರ್ವರ್ಡ್ ಮಾಡಿದ್ದ. ವಿಷಯದ ಗಂಭೀರತೆ ಅರ್ಥವಾದ ಕೂಡಲೇ ಅದೇ ದಿನ ಸಂಜೆ ಅದನ್ನು ತನ್ನ ಖಾತೆಯಿಂದ ತೆಗೆದಿದ್ದಾನೆ ಎಂಬುದಾಗಿ ನವೀನ್ ಪರ ವಕೀಲರು ತಿಳಿಸಿದ್ದಾರೆ.
ಇನ್ನು ನವೀನ್ ಈ ರೀತಿಯ ಪೋಸ್ಟ್ ಹಾಕುವುದನ್ನು ಅಭ್ಯಾಸ ಮಾಡಿಕೊಂಡಿದ್ದಾನೆ. ಆತನ ವಿರುದ್ಧ ವಿವಿಧ ಠಾಣೆಗಳಲ್ಲಿ ಇದೇ ರೀತಿಯ ಏಳು ಪ್ರಕರಣಗಳು ದಾಖಲಾಗಿವೆ. ಅಲ್ಲದೇ ವ್ಯಕ್ತಿಯೊಬ್ಬ ನವೀನ್ ತಲೆಗೆ ಬಹುಮಾನ ಘೋಷಣೆ ಮಾಡಿರುವ ಕಾರಣ ಜಾಮೀನು ನೀಡಿದರೆ ಆತನ ಜೀವಕ್ಕೆ ಅಪಾಯ ಇದೆ ಎಂಬುದಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪಿ. ಪ್ರಸನ್ನಕುಮಾರ್ ಅವರು ವಾದಿಸಿದ್ದಾರೆ.
ನವೀನ್ ಪ್ರತಿ ತಿಂಗಳ 1ರಂದು ಠ್ಯಾಣೆಗೆ ಹಾಜರಾಗಬೇಕು ಮತ್ತು ಪೂರ್ವಾನುಮತಿ ಇಲ್ಲದೆ ವಿಚಾರಣಾ ನ್ಯಾಯಾಲಯದ ವ್ಯಾಪ್ತಿಯಿಂದ ಹೊರ ಹೋಗಬಾರದು ಎಂದು ತಿಳಿಸಿದ್ದಾರೆ.