ಪಟ್ನಾ, ಅ. 23 (DaijiworldNews/PY): ಪ್ರಧಾನಿ ಮೋದಿ ಅವರು ಇಂದು ಮೂರು ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ವೇಳೆ ಅವರು ಬಿಹಾರಕ್ಕೆ ನಿರುದ್ಯೋಗದ ಸಮಸ್ಯೆ ಬಿಟ್ಟರೆ ಎನ್ಡಿಎ ಸರ್ಕಾರದ ಕೊಡುಗೆಗಳು ಏನು? ಎನ್ನುವ ಬಗ್ಗೆ ಮಾತನಾಡಲಿದ್ದಾರೆ ಎಂದು ಭಾವಿಸಿದ್ದೇನೆ ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ತೇಜಸ್ವಿ ಯಾದವ್, ಪ್ರಧಾನಿ ಮೋದಿ ಅವರು ಇಂದು ನಡೆಯುವ ಭಾಷಣದಲ್ಲಿ, ಬಿಜೆಪಿ ಹಾಗೂ ಜೆಡಿಯು ಸರ್ಕಾರವು 15 ವರ್ಷಗಳ ಕಾಲ ಆಡಳಿತ ನಡೆಸಿದ್ದರೂ ಕೂಡಾ ಶಿಕ್ಷಣ ಸೇರಿದಂತೆ ಆರೋಗ್ಯ, ಉದ್ಯೋಗ ಸೃಷ್ಠಿ, ಕೃಷಿ ಕ್ಷೇತ್ರಗಳಲ್ಲಿ ರಾಜ್ಯವು ಹಿನ್ನಡೆಯಾಗಲು ಏನು ಕಾರಣ ಎನ್ನುವುದನ್ನು ಬಿಹಾರದ ನಿವಾಸಿಗಳಿಗೆ ತಿಳಿಸಲಿದ್ದಾರೆ ಎಂದು ಅಂದುಕೊಂಡಿದ್ದೇನೆ ಎಂದಿದ್ದಾರೆ.
ಅಕ್ಟೋಬರ್ 28, ನವೆಂಬರ್ 3 ಹಾಗೂ 7ರಂದು ಬಿಹಾರದ ವಿಧಾನಸಭೆ ಚುನಾವಣೆಯು ನಡೆಯಲಿದ್ದು, ಚುನಾವಣಾ ಫಲಿತಾಂಶವು ನವೆಂಬರ್ 10ರಂದು ಪ್ರಕಟವಾಗಲಿದೆ.