ನವದೆಹಲಿ, ಅ. 23 (DaijiworldNews/PY): ರಷ್ಯಾದಲ್ಲಿ ಅಭಿವೃದ್ದಿಪಡಿಸಿರುವ ಕೊರೊನಾ ಪ್ರಾಯೋಗಿಕ ಲಸಿಕೆ ಸ್ಪುಟ್ನಿಕ್ ವಿ ಪ್ರಯೋಗವು ಭಾರತದ 100 ಸ್ವಯಂ ಸೇವಕರ ಮೇಲೆ ಪರೀಕ್ಷಿಸಲಾಗುವುದು ಎಂದು ಡಿಸಿಐಜಿ ತಿಳಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಪರೀಕ್ಷೆ ನಡೆಸಲು ಡಾ.ರೆಡ್ಡಿ ಅವರ ಪ್ರಯೋಗಾಲಯಗಳಿಗೆ ಅನುಮತಿ ನೀಡಲಾಗಿದೆ. ಆದರೂ, ಪರೀಕ್ಷೆಯ ದಿನಾಂಕ ಹಾಗೂ ಸಮಯವನ್ನು ಕಂಪೆನಿ ನಿರ್ಧರಿಸುತ್ತದೆ ಎಂದು ತಿಳಿಸಿದೆ.
ರಷ್ಯಾದ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್, ಹೈದರಾಬಾದ್ನ ರೆಡ್ಡೀಸ್ ಲ್ಯಾಬೊರೇಟರಿಯೊಂದಿಗೆ ಭಾರತದಲ್ಲಿ ಸ್ಪುಟ್ನಿಕ್-ವಿ ಲಸಿಕೆ ಮಾರಾಟ ಹಾಗೂ ಕ್ಲಿನಿಕಲ್ ಟ್ರಯಲ್ಸ್ ನಡೆಸುವ ಸಲುವಾಗಿ ಒಪ್ಪಂದ ಮಾಡಿಕೊಂಡಿತ್ತು. ಈಗ ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆಯನ್ನು ಮಾನವನ ಮೇಲೆ ಪ್ರಯೋಗ ಮಾಡಲು ಡಿಸಿಜಿಯಿಂದ ಅನುಮತಿ ಸಿಕ್ಕಿರುವುದಾಗಿ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ತಿಳಿಸಿದೆ.
ಲಸಿಕೆಯು ಮೂರನೇ ಹಂತಕ್ಕೆ ತೆರಳುವ ಮೊದಲು ಪ್ರಸ್ತುತ ಅದರ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿದ್ದು, 100 ವಿಷಯಗಳ ಬಗ್ಗೆ ಸುರಕ್ಷತೆ ಸೇರಿದಂತೆ ಇಮ್ಯುನೊಜೆನೆಸಿಟಿ ಡೇಟಾವನ್ನು ತಯಾರು ಮಾಡಬೇಕು. ಮೂರನೇ ಹಂತದಲ್ಲಿ 1400 ವಿಷಯಗಳನ್ನು ಇದು ತೆಗೆದುಕೊಳ್ಳುತ್ತದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರ್ಡಿಐಎಫ್ ಸ್ಪುಟ್ನಿಕ್ ವಿ ಲಸಿಕೆಯ ಕ್ಲಿನಿಕಲ್ ಪ್ರಯೋಗ ಮತ್ತು ವಿತರಣೆಗಾಗಿ ಸೆಪ್ಟೆಂಬರ್ 2020 ರಲ್ಲಿ ಡಾ. ರೆಡ್ಡೀಸ್ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.